ಕೋಟ: ಮಕ್ಕಳು ಕಲೆಯಿಂದ ಬೆಳಗಿ ಸಮಾಜ ಬೆಳಗಿಸುವ ಕಾರ್ಯ ಆಗಲೇಬೇಕಿದೆ ಎಂದು ಸಾಹಿತಿ ಸುಧಾ ಆಡುಕುಳ ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವಿ ಕಲಾವೃಂದದ ಸಿನ್ಸ್ 1999 ಶ್ವೇತಯಾನ-44ರ ಕಾರ್ಯಕ್ರಮದ ಅಡಿಯಲ್ಲಿ ಧಮನಿ ಟ್ರಸ್ಟ್ ನೇತೃತ್ವದಲ್ಲಿನ 25 ದಿನಗಳ ಮಕ್ಕಳ ನಾಟಕ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಂಗಭೂಮಿಯನ್ನು ಬಲಗೊಳಿಸಲು ಆರ್ಥಿಕ ಭದ್ರತೆ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕಲಾಸಕ್ತರು ಮನಮಾಡಬೇಕು ಎಂದರು. ಸಿನ್ಸ್ 1999 ಶ್ವೇತಯಾನದ ಕಾರ್ಯಾಧ್ಯಕ್ಷರಾದ ಸುಜಯ್ ಕುಮಾರ್ ಶೆಟ್ಟಿ, ಕೊಮೆ ಗೋಪಾಲ ಪೂಜಾರಿ, ಶಿವರಾಮ ಶೆಟ್ಟಿ ಮಲ್ಯಾಡಿ, ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್, ಅಭಿಲಾಷ ಎಸ್., ವಿಜಿತ್, ಶ್ರೀಶ ತೆಕ್ಕಟ್ಟೆ, ರಂಜಿತ್ ಶೆಟ್ಟಿ ಕುಕ್ಕುಡೆ ಉಪಸ್ಥಿತರಿದ್ದರು. ಸಚಿನ್ ಅಂಕೋಲ ನಿರೂಪಿಸಿದರು. ವೈದೇಹಿಯವರ ನಾಟಕ ಸೂರ್ಯ ಬಂದ ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನದಲ್ಲಿ ರಂಗ ಪ್ರಸ್ತುತಿಗೊಂಡಿತು.