ಆತ ಸಾಂಪ್ರದಾಯಿಕ ಆದರೆ ಹೆಚ್ಚು ಪರಿಣಾಮಕಾರಿ; ಟೀಮ್​ ಇಂಡಿಯಾ ಆಟಗಾರನನ್ನು ಹಾಡಿ ಹೊಗಳಿದ ಮಾಜಿ ಕ್ರಿಕೆಟಿಗ

Team India (1)
Published on

ಬಾರ್ಬೋಡಾಸ್​: ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನ 43ನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ. ಇನ್ನೂ ಟೀಮ್​ ಇಂಡಿಯಾ ಪರ ಅಮೋಘ ಪ್ರದರ್ಶನ ನೀಡುತ್ತಿರುವ ವೇಗಿ ಜಸ್ಪ್ರೀತ್​ ಬುಮ್ರಾ ಎಲ್ಲರ ಹಾಟ್​ ಫೇವರೆಟ್​​ ಆಗಿದ್ದು, ಎಲ್ಲರು ಇವರನ್ನು ಹಾಡಿಹೊಗಳುತ್ತಿದ್ದಾರೆ.

ಇನ್ನೂ ಬುಮ್ರಾ ಪ್ರದರ್ಶನದ ಕುರಿತು ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ ಕರ್ಟ್ಲಿ ಆಂಬ್ರೋಸ್ ನಾನು ಜಸ್ಪ್ರೀತ್​ನ ದೊಡ್ಡ ಅಭಿಮಾನಿ ಆತ ಪ್ರದರ್ಶನ ನೀಡುತ್ತಿರುವ ರೀತಿ ನಮ್ಮೆಲ್ಲರಿಗೂ ಅಚ್ಚುಮೆಚ್ಚಾಗಿದ್ದು, ಆತ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಕಮ್​ಬ್ಯಾಕ್​ ಮಾಡಿದ ರೀತಿ ಶ್ಲಾಘನೀಯ.

Jasprit Ambrose

ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ತನ್ನ 2ನೇ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಈ ನಡುವೆ ಟೀಮ್​ ಇಂಡಿಯಾ ಆಟಗಾರರು ಹಾಲಿ ಟೂರ್ನಿಯಲ್ಲಿ ಹಸೊ ದಾಖಲೆಯನ್ನು ಬರೆಯುತ್ತಿದ್ದು, ಇಂದು ಕೂಡ ದಾಖಲೆ ಬರೆಯುವ ಇರಾದೆಯಲ್ಲಿದ್ದಾರೆ.

ನಾನು ಆತನನ್ನು ಮೊದಲ ಬಾರಿಗೆ ನೋಡಿದ ಸಮಯದಿಂದಲೂ ಇಲ್ಲಿಯವರೆಗೂ ಆತ ಹೆಚ್ಚು ಪರಿಣಾಮಕಾರಿಯಾಗಿ ಆಟವಾಡಿದ್ದಾನೆ. ಆತ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾನೆ. ನಾನು ನೋಡಿದಂತೆ ಬುಮ್ರಾ ವಿಭಿನ್ನ ಆಟಗಾರನಾಗಿದ್ದು, ಆತ ಬೌಲಿಂಗ್​ ಮಾಡುವುದನ್ನು ನೋಡುವುದೇ ನನಗೆ ಖುಷಿ ನೀಡುತ್ತದೆ ಎಂದು ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ ಕರ್ಟ್ಲಿ ಆಂಬ್ರೋಸ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net