ನಟ ಸುಶಾಂತ್​ ಸಿಂಗ್ ರಜಪೂತ್​ ಅಂತ್ಯಕ್ರಿಯೆ ಬೆನ್ನಲ್ಲೇ ಅತ್ತಿಗೆ ಸಾವು​

sushant bucket list
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದೇ ಅದೇ ದುಃಖದಲ್ಲಿ ಸುಶಾಂತ್​ ಅವರ ಅತ್ತಿಗೆ ಸಾವಿಗೀಡಾಗಿರುವ ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.

ಸೋದರನ ಹೆಂಡತಿ ಸುಶಾ ದೇವಿ ಮೃತಪಟ್ಟಿದ್ದು, ಸುಶಾಂತ್ ಸಾವಿನ ಸುದ್ದಿ ತಿಳಿದಾಗಿನಿಂದ ಒಂದು ಅಗಳು ಅನ್ನವನ್ನು ಸಹ ತಿಂದಿರಲಿಲ್ಲ ಎಂದು ತಿಳಿದುಬಂದಿದೆ. ಸುಶಾಂತ್​ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಸುಶಾ ದೇವಿ ಸಹ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಇದು ಆತ್ಮಹತ್ಯೆಯಲ್ಲ; ಕೊಲೆ ಎಂದ ಕಂಗನಾ

ಸುಶಾಂತ್​ ಅವರು ಭಾನುವಾರ ಬೆಳಗ್ಗೆ ಮುಂಬೈನಲ್ಲಿನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಮುಂಬೈ ಪೊಲೀಸರು ತನಿಖೆ ನಡೆಸಿದಾಗ ಸುಶಾಂತ್​ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದ್ದು, ಅದಕ್ಕೆ ಸಂಬಂಧಿಸಿದ ಔಷಧಗಳ ಸಹ ದೊರಕಿವೆ. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸುಶಾಂತ್​ ಸಂಬಂಧಿಕರು ಆರೋಪಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಅಂದಹಾಗೆ ಸುಶಾಂತ್​ ಅಂತ್ಯಕ್ರಿಯೆ ಸೋಮವಾರ ಮುಂಬೈನ ಪವನ್​ ಹನ್ಸ್​ ರುದ್ರಭೂಮಿಯಲ್ಲಿ ಕುಟುಂಬ ಹಾಗೂ ಕಿರುತೆರೆ ಹಾಗೂ ಹಿರಿತೆರೆಯ ಆಪ್ತರ ಸಮ್ಮುಖದಲ್ಲಿ ನೇರವೇರಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net