ಕೈವ್: ಯುಕ್ರೇನ್(Ukraine) ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆ ಮಧ್ಯೆ ಯುಕ್ರೇನ್ ರಷ್ಯಾದ ಮಾಸ್ಕೋ ಮೇಲೆ ಇದುವರೆಗಿನ ಅತಿದೊಡ್ಡ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ರಷ್ಯಾ ಭಾರೀ ನಷ್ಟವನ್ನು ಅನುಭವಿಸಿದೆ. ಯುಕ್ರೇನ್ ಇತ್ತೀಚೆಗೆ ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಬೃಹತ್ ಡ್ರೋನ್ ದಾಳಿ ನಡೆಸಿದ್ದು ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಯುಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಭೇಟಿಯಾಗಲಿರುವ ಟ್ರಂಪ್; ರಷ್ಯಾದೊಂದಿಗಿನ ಯುದ್ಧ ನಿಲ್ಲುತ್ತದೆಯೇ? |Volodymyr Zelensky
ಬೃಹತ್ ದಾಳಿಯಲ್ಲಿ ರಷ್ಯಾದ ರಾಜಧಾನಿಯನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಒಟ್ಟು 69 ಯುಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಹೇಳಿದ್ದಾರೆ ಎಂದು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ದಾಳಿಯು ಕೆಲವು ತಿಂಗಳುಗಳಲ್ಲಿ ನಡೆದ ಅತಿದೊಡ್ಡ ದಾಳಿಯಾಗಿತ್ತು.
ರಷ್ಯಾ ಮತ್ತು ಯುಕ್ರೇನ್ ನಡುವಿನ 3 ವರ್ಷಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ಯುಕ್ರೇನಿಯನ್ ನಿಯೋಗವು ಸೌದಿ ಅರೇಬಿಯಾದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ಭೇಟಿಯಾಗಲಿರುವ ಕೆಲವೇ ದಿನಗಳ ಮೊದಲು ಮಾಸ್ಕೋ ಮೇಲೆ ದಾಳಿ ನಡೆದಿದೆ.
ಮಾಸ್ಕೋ ಪ್ರದೇಶದ ರಾಮೆನ್ಸ್ಕಿ ಮತ್ತು ಡೊಮೊಡೆಡೋವೊ ಜಿಲ್ಲೆಗಳ ಮೇಲೆ ಕನಿಷ್ಠ 11 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ತಿಳಿಸಿದ್ದಾರೆ. ಇತರ ಡ್ರೋನ್‌ಗಳನ್ನು ಎಲ್ಲಿ ಹೊಡೆದುರುಳಿಸಲಾಗಿದೆ ಎಂಬುದನ್ನು ಅವರು ವಿವರಿಸಲಿಲ್ಲ.
ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರವಾದ ರೊಸಾವಿಯಾಟ್ಸಿಯಾ ಪ್ರಕಾರ, ದಕ್ಷಿಣದಲ್ಲಿ ಡೊಮೊಡೆಡೋವೊ, ವ್ನುಕೊವೊ ಮತ್ತು ಝುಕೊವ್ಸ್ಕಿ ಮತ್ತು ಉತ್ತರದಲ್ಲಿ ಶೆರೆಮೆಟಿಯೆವೊ ಸೇರಿದಂತೆ ಮಾಸ್ಕೋದ ನಾಲ್ಕು ವಿಮಾನ ನಿಲ್ದಾಣಗಳಿಗೆ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ಡೊಮೊಡೆಡೋವೊ ರೈಲು ನಿಲ್ದಾಣದ ಮೂಲಕ ರೈಲು ಸಂಚಾರವನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ವರದಿ ಮಾಡಿದ್ದಾರೆ.(ಏಜೆನ್ಸೀಸ್)