15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ; ಯಾವಾಗ ಕಳವಾಗಿದ್ದವು ಗೊತ್ತಾ?

God
Published on

ನವದೆಹಲಿ: ಯುನೈಟೆಡ್​ ಕಿಂಗ್​ಡಮ್​​​ನಲ್ಲಿ ಇದ್ದ 15ನೇ ಶತಮಾನದ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಅಲ್ಲಿನ ಅಧಿಕಾರಿಗಳು ಹಿಂತಿರುಗಿಸಿದ್ದಾರೆ ಎಂದು ಸಾಂಸ್ಕೃತಿಕ ಸಚಿವ ಪ್ರಲ್ಹಾದ್​ ಸಿಂಗ್​ ಪಟೇಲ್​ ಅವರು ತಿಳಿಸಿದ್ದಾರೆ.

ತಮಿಳುನಾಡಿನ ದೇವಸ್ಥಾನವೊಂದರಿಂದ 1978ರಲ್ಲಿ ಒಟ್ಟು ಮೂರು ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಇವು 15 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದ್ದವು. ವಿಗ್ರಹಗಳನ್ನು ಕಳವು ಮಾಡಿ ಯುಕೆಗೆ ಸ್ಮಗ್ಲಿಂಗ್​ ಮಾಡಲಾಗಿತ್ತು. ಇದೀಗ ಯುಕೆ ಸರ್ಕಾರ ಆ ವಿಗ್ರಹಗಳನ್ನು ಮತ್ತು ಒಂದು ಸ್ತಂಭವನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದಿದ್ದಾರೆ. ಹಾಗೇ ವಿಗ್ರಹ ಹಸ್ತಾಂತರ ಮಾಡಲು ಲಂಡನ್​​ನ ಭಾರತೀಯ ಹೈಕಮಿಷನ್​ ಕೂಡ ತುಂಬ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಈಗಿದೆಲ್ಲ ಕಾಮನ್..ನಾವೂ ಕ್ಯಾಸಿನೋಕ್ಕೆ ಹೋಗಿದ್ವಿ, ಆದ್ರೆ…’ -ನಟ ದಿಗಂತ್​ ತಾಯಿ ಹೇಳಿದ್ದು ಹೀಗೆ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಿಂದ ಈಚೆಗೆ ಒಟ್ಟು 40 ಪ್ರಾಚೀನ ವಿಗ್ರಹಗಳನ್ನು ಸಂಗ್ರಹಿಸಿದೆ. ಇವೆಲ್ಲ ಈ ಹಿಂದೆ ಕಳವಾಗಿ, ಬೇರೆ ದೇಶಗಳಿಗೆ ಕಳ್ಳಸಾಗಣೆ ಆಗಿದ್ದವುಗಳು. ಸ್ವಾತಂತ್ರ್ಯಾನಂತರ 2013ರವರೆಗೆ ಬರೀ 13 ಕಲಾಕೃತಿಗಳು ಮತ್ತು ಪ್ರಾಚೀನವಸ್ತುಗಳನ್ನಷ್ಟೇ ಸಂಗ್ರಹಿಸಲಾಗಿತ್ತು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ‘ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ’

ಹಾಗೇ 20 ವರ್ಷಗಳ ಹಿಂದೆ ರಾಜಸ್ಥಾನದಿಂದ ಕಳವಾಗಿದ್ದ 9ನೇ ಶತಮಾನದ ಶಿವನ ವಿಗ್ರಹವನ್ನು ಆಗಸ್ಟ್​​ನಲ್ಲಿ ಲಂಡನ್​ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net