

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸ್ಟಾರ್ ದಂಪತಿಗಳಾದ ಐಂದ್ರಿತಾ ರೈ ಮತ್ತು ದಿಗಂತ್ಗೆ ಸಿಸಿಬಿ ನೋಟಿಸ್ ಕಳಿಸಿದೆ. ಈ ಬಗ್ಗೆ ದಿಗಂತ್ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ದಿಗಂತ್ ಮತ್ತು ಐಂದ್ರಿತಾಗೆ ನೋಟಿಸ್ ಬಂದಿದ್ದು ನನಗೆ ಗೊತ್ತಿಲ್ಲ. ನಾವು ಟಿವಿ ನೋಡಿಲ್ಲ. ನನಗೆ ಅಣ್ಣ ಕರೆ ಮಾಡಿ ಕೇಳಿದರು. ಈ ಬಗ್ಗೆ ಮಾತನಾಡಲು ದಿಗಂತ್ಗೆ ಕರೆ ಮಾಡಿದರೆ ಅವರು ಫೋನ್ ಪಿಕ್ ಮಾಡುತ್ತಿಲ್ಲ. ನಿನ್ನೆ ಬೆಳಗ್ಗೆಯೇ ಕೇರಳಕ್ಕೆ ಹೋಗಿದ್ದಾರೆ. ಇದುವರೆಗೂ ಒಂದೇ ಒಂದು ಫೋನ್ ಮಾಡಿಲ್ಲ ಎಂದು ಹೇಳಿದರು.
ಇನ್ನು ಶ್ರೀಲಂಕಾದಲ್ಲಿ ಹಿಂದಿ ಮೂವಿ ಪ್ರಮೋಶನ್ಗೆ ಹೋಗಿದ್ದಾಗಿ ನನ್ನ ಸೊಸೆ ತಿಳಿಸಿದ್ದಳು. ನಾವು ಕುಟುಂಬದವರು ಶ್ರೀಲಂಕಾಗೆ ತೆರಳಿದ್ದಾಗ ಕ್ಯಾಸಿನೋಗೆ ಕೂಡ ಹೋಗಿದ್ದೆವು. ಆಗಲೂ ಐಂದ್ರಿತಾ, ಅವರು ಡ್ಯಾನ್ಸ್ ಮಾಡಿದ ಜಾಗವನ್ನೆಲ್ಲ ತೋರಿಸಿದ್ದಳು. ಕ್ಯಾಸಿನೋ ಇಲ್ಲಂತೂ ಇಲ್ಲ. ಶ್ರೀಲಂಕಾಕ್ಕೆ ಹೋದಾಗ ಅವರು ಆಡಿರಬಹುದು. ಇನ್ನು ಕ್ಲಬ್, ಪಾರ್ಟಿಗಳೆಲ್ಲ ಈಗ ಕಾಮನ್. ಆಮಂತ್ರಣ ನೀಡಿರುತ್ತಾರೆ ಇವರೂ ಹೋಗಿರುತ್ತಾರೆ. ಆದರೆ ಡ್ರಗ್ಸ್ ಎಂಬುದು ಇಲ್ಲವೇ ಇಲ್ಲ ಎಂದು ಮಲ್ಲಿಕಾ ತಿಳಿಸಿದರು. ಇದನ್ನೂ ಓದಿ:‘ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ’
ನಮ್ಮದು ಸಾಂಪ್ರದಾಯಿಕ ಕುಟುಂಬ. ನಮ್ಮ ಮನೆಯಲ್ಲಿ ಅದಕ್ಕೆಲ್ಲ 100 ಪರ್ಸಂಟ್ ವಿರೋಧವಿದೆ. ನನ್ನ ಪತಿ ಕಾಲೇಜ್ ಪ್ರೊಫೆಸರ್ ಆಗಿದ್ದವರು. ತುಂಬ ಮಕ್ಕಳಿಗೆ ಪಾಠ ಮಾಡುವವರು ಅಂಥದ್ದೆಲ್ಲ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಫಾಝೀಲ್ ಜತೆ ನನ್ನ ಕಾಂಟಾಕ್ಟ್ ಇಲ್ಲ. ಆದರೂ ಯಾಕೆ ಹೀಗೆಲ್ಲ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಐಂದ್ರಿತಾ ತುಂಬ ಬೇಸರ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದರು.(ದಿಗ್ವಿಜಯ ನ್ಯೂಸ್)