ಸಿದ್ದರಾಮಯ್ಯರನ್ನು ಮುಜುಗರಕ್ಕೆ ಈಡುಮಾಡಿದ ಉಗ್ರಪ್ಪ; 'ತಿಂದಿದ್ದು ಅರಗಲ್ವಾ?' ಎಂದು ಉಗ್ರಪ್ಪ ಬಾಯ್ಮುಚ್ಚಿಸಿದ ಸಿದ್ದು..

Siddaramaiah
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಜುಗರಕ್ಕೆ ಒಳಗಾಗುವಂತೆ ಅವರದೇ ಪಕ್ಷದ ಇನ್ನೊಬ್ಬ ನಾಯಕರು ನಡೆದುಕೊಂಡ ಪ್ರಸಂಗವೊಂದು ನಡೆದಿದೆ. ಸಿದ್ದರಾಮಯ್ಯ ಅವರಿಗೆ ಇರಿಸುಮುರಿಸಾಗುವ ರೀತಿಯಲ್ಲಿ ಕಾಂಗ್ರೆಸ್​ ನಾಯಕ ಉಗ್ರಪ್ಪ ಮಾತನಾಡಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶದ ಸಲುವಾಗಿ ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ಪ್ರಸಂಗ ನಡೆದಿದೆ. ಪೂರ್ವಭಾವಿ ಸಭೆಗೆ ನೀವು ಕರೆಯದಿದ್ದರೂ ಬಂದಿದ್ದೀರಿ ಎಂದು ಉಗ್ರಪ್ಪ ಬಹಿರಂಗವಾಗಿ ಹೇಳಿದ್ದು ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾಗುವಂಥ ಪರಿಸ್ಥಿತಿ ಸೃಷ್ಟಿಸಿತ್ತು.

'ಸಿದ್ದರಾಮಯ್ಯನವರೇ ನಿಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ, ಆದರೂ ಯಾಕೆ ಬಂದ್ರಿ?' ಎಂದು ಉಗ್ರಪ್ಪ ಕೇಳಿದರು. 'ಏ ಉಗ್ರಪ್ಪ, ನಾನು ಬರೋ ಹಂಗೆ ಇರಲಿಲ್ಲ, ಪರಮೇಶ್ವರ್ ಫೋನ್ ಮಾಡಿ ಕರೆದ್ರು, ಅದಕ್ಕೇ ಬಂದಿದೀನಿ. ನಿಂಗೆ ಈ ಥರ ಮಾತಾಡಿಲ್ಲ ಅಂದ್ರೆ ತಿಂದಿದ್ದು ಅರಗಲ್ವಾ?' ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಉಗ್ರಪ್ಪ ನಕ್ಕು ಸುಮ್ಮನಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net