ಬ್ರೂಸ್​ ಲೀ ಸತ್ತ 49 ವರ್ಷಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!; ಸಮರಕಲೆ ಪ್ರವೀಣ ಸತ್ತಿದ್ದು ಹೇಗೆ?

Bruce Lee
Published on

ನವದೆಹಲಿ: ಸಮರಕಲೆ ಪ್ರವೀಣ, ಚಿತ್ರನಟ ಬ್ರೂಸ್​ ಲೀ ಸಾವಿನ ಹಿಂದೆ ಹಲವಾರು ಊಹಾಪೋಹಗಳಿದ್ದು, ಅದಕ್ಕೆಲ್ಲ ತೆರೆ ಎಳೆಯುವಂಥ ಅಂಶವೊಂದು ಅಧ್ಯಯನವೊಂದರಲ್ಲಿ ಬಹಿರಂಗಗೊಂಡಿದೆ. ಮಾತ್ರವಲ್ಲ, ಆತ ಸತ್ತ 49 ವರ್ಷಗಳ ಸತ್ತಿದ್ದು ಹೇಗೆ ಎಂಬುದು ಬಯಲಾಗಿದೆ.

ಸಮರಕಲೆಯನ್ನು ನೈಪುಣ್ಯ ಹೊಂದಿದ್ದ, ಅಭಿನಯದಲ್ಲೂ ಪಳಗಿದ್ದ ಬ್ರೂಸ್ ಲೀ ತನ್ನ 32ನೇ ವಯಸ್ಸಿನಲ್ಲಿ ಅಂದರೆ 1973ರ ಜುಲೈ 20ರಂದು ಸಾವಿಗೀಡಾಗಿದ್ದರು. ಅವರ ಸಾವಿನ ಕುರಿತ ನಿಖರ ಕಾರಣ ಬಹಿರಂಗವಾಗದ್ದರಿಂದ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಇದೀಗ ಅಧ್ಯಯನವೊಂದು ಅವರ ಸಾವಿಗೆ ಕಾರಣ ಏನು ಎಂಬುದನ್ನು ತಿಳಿಸಿದೆ.

ಬ್ರೂಸ್ ಲೀ ಮೆದುಳು ಊದಿಕೊಂಡು ಸಾವಿಗೀಡಾಗಿದ್ದರು ಎಂಬುದನ್ನು ಅವರ ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿತ್ತು. ಅಂದರೆ ಸಾಮಾನ್ಯವಾಗಿ 1,400 ಗ್ರಾಮ್ಸ್ ಇರುವಂಥ ಮೆದುಳು 1,575 ಗ್ರಾಮ್ಸ್​ನಷ್ಟು ಊದಿಕೊಂಡಿತ್ತು ಎನ್ನಲಾಗಿದೆ. ಆದರೆ ಕ್ಲಿನಿಕಲ್ ಕಿಡ್ನಿ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಸಾವಿಗೆ ಕಾರಣ ಏನು ಎಂಬುದನ್ನು ಹೇಳಲಾಗಿದೆ.

ಹೆಚ್ಚುವರಿ ನೀರನ್ನು ಹೊರಹಾಕುವಲ್ಲಿ ಮೂತ್ರಪಿಂಡ ವಿಫಲಗೊಂಡಿದ್ದರಿಂದ ಬ್ರೂಸ್​ ಲೀ ಸಾವು ಸಂಭವಿಸಿದೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ. ಬಿ ವಾಟರ್ ಮೈ ಫ್ರೆಂಡ್ (ನೀರಿನಂತಿರು ನನ್ನ ಗೆಳೆಯ) ಎಂಬದು ಬ್ರೂಸ್​ ಲೀಯ ಫೇಮಸ್ ಕೋಟ್. ಆದರೆ ಅವರ ಸಾವೂ ನೀರಿನಿಂದಾಗಿತ್ತು ಎಂದು ಈ ಅಧ್ಯಯನದ ಕೊನೆಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net