

ಬಳ್ಳಾರಿ: ಇಬ್ಬರು ಹೆಂಡ್ತಿಯರ ಗಂಡನೊಬ್ಬ ನನಗೆ ಪತ್ನಿ ಬೇಕೆಂದು ತೆಂಗಿನ ಮರವೇರಿ ಪ್ರತಿಭಟನೆ ನಡೆಸಿದ ವಿಚಿತ್ರ ಘಟನೆ ಜಿಲ್ಲೆಯ ದಾಸೋಬನಹಳ್ಳಿಯಲ್ಲಿ ಸಂಭವಿಸಿದೆ.
ಎರಡು ಮದುವೆಯಾದರೂ ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲವೆಂದು ಬೇಸತ್ತ ದೊಡ್ಡಪ್ಪ ಎಂಬಾತ ಪತ್ನಿ ಬೇಕೆಂದು ತೆಂಗಿನ ಮರವೇರಿ ಕುಳಿತಿದ್ದ.
ಸುಮಾರು 20 ವರ್ಷ ಹಿಂದೆ ಗ್ರಾಮದ ಸೋದರ ಸೊಸೆಯೊಂದಿಗೆ ದೊಡ್ಡಪ್ಪ ಮದುವೆಯಾಗಿದ್ದ. ಮಕ್ಕಳಾಗದ ಕಾರಣ ಆಕೆ ತವರು ಸೇರಿದ್ದಳು. 2ನೇ ಮದುವೆಯಾಗಿದ್ದ ದೊಡ್ಡಪ್ಪ ದಂಪತಿಗೆ ಮೂರು ಗಂಡು ಮಕ್ಕಳಿದ್ದಾರೆ. ಆದರೆ, ದೊಡ್ಡಪ್ಪ ಹಾಗೂ ಪತ್ನಿ ನಡುವಿನ ಮನಸ್ತಾಪದಿಂದ 5 ವರ್ಷಗಳ ಹಿಂದೆ ಮಕ್ಕಳನ್ನು ಬಿಟ್ಟು ಆಕೆಯೂ ತವರು ಸೇರಿದ್ದಾಳೆ.
ಇದರಿಂದ ಬೇಸತ್ತ ದೊಡ್ಡಪ್ಪ, ಪತ್ನಿ ಬೇಕೆಂದು ಮರ ಏರಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ್ದಾನೆ. ಮರದಿಂದ ಕೆಳಗಿಳಿಯುವಂತೆ ಗ್ರಾಮಸ್ಥರು, ಮಕ್ಕಳು ಹೇಳಿದರು ಕೂಡ ದೊಡ್ಡಪ್ಪ ಕೆಳಗಿಳಿಯಲಿಲ್ಲ. ಸ್ಥಳಕ್ಕೆ ಪೊಲೀಸರು ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಮೇಲೆ ದೊಡ್ಡಪ್ಪ ಮರದಿಂದ ಇಳಿದಿದ್ದಾನೆ.