ಭಾನುವಾರ ಅಂತರಂಗ ತಂಡದ ಎರಡು ನಾಟಕ ಪ್ರದರ್ಶನ

drama
Published on

ಬೆಂಗಳೂರು: 45 ವರ್ಷಗಳಿಂದ ನಿರಂತರ ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಅಂಕಲ್ ಶ್ಯಾಮ್ ನೇತೃತ್ವದ ಅಂತರಂಗ ತಂಡದಿಂದ ಭಾನುವಾರ (ಮೇ25) ಎರಡು ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಟಿ.ಪಿ. ಕೈಲಾಸಂರ ಹೋಂ ರೂಲು ಮತ್ತು ಶ್ರೀಧರ್ ಯಡ್ರಾವಿಯವರ ಕನ್ನಡಕ್ಕೊಬ್ಬನೇ ಕೈಲಾಸಂ ನಾಟಕಗಳ ಪ್ರದರ್ಶನವನ್ನು ಭಾನುವಾರ ಸಂಜೆ 7.15ಕ್ಕೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ದೂ : 9880914509 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net