ಅನ್ಯಕೋಮಿನವರಿಂದ ಆರ್​ಎಸ್​ಎಸ್​ ಮುಖಂಡನ ಮುಖಕ್ಕೆ ಚಾಕು ಇರಿತ...

RSS
ಘಟನೆ ಖಂಡಿಸಿ ಪ್ರತಿಭಟನೆ
Published on

ಕೋಲಾರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​​ಎಸ್ಎಸ್​) ಮುಖಂಡನ ಮುಖಕ್ಕೆ ಅನ್ಯಕೋಮಿನ ಇಬ್ಬರು ಚಾಕು ಇರಿದ ಪ್ರಕರಣವೊಂದು ಹಾಡಹಗಲೇ ನಡೆದಿದೆ. ಕೋಲಾರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಆರ್​ಎಸ್ಎಸ್​ ಮುಖಂಡ ರವಿ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ರವಿಗೆ ಕಿವಿಯ ಭಾಗದಲ್ಲಿ ಗಾಯವಾಗಿದೆ.

ರವಿ ಮಾಲೀಕತ್ವದ ಸ್ಟೀಲ್ ಅಂಗಡಿ ಮುಂದೆ ಇಂದು ಮಧ್ಯಾಹ್ನ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ‌ ನಡೆಯುತಿತ್ತು. ಆ ಸಂದರ್ಭದಲ್ಲಿ ರವಿ ಗಲಾಟೆ ಬಿಡಿಸಲು ಹೋಗಿದ್ದು, ಆಗ ಅನ್ಯಕೋಮಿನ ಇಬ್ಬರು ರವಿಯ ಮುಖಕ್ಕೆ ಚಾಕು ಹಾಕಿದ್ದಾರೆ. ಚಾಕು ಇರಿದಿದ್ದನ್ನು ಖಂಡಿಸಿ ಮಾಲೂರು ಬಸ್ ನಿಲ್ದಾಣದಲ್ಲಿ ಆರ್​ಎಸ್​ಎಸ್​ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕು ಇರಿದವರು ಗಾಂಜಾ ಸೇವಿಸಿದ್ದು, ಗಲಾಟೆ ಬಿಡಿಸಿ ವಾಪಸ್ ಆಗುವಾಗ ಅವರು ಚಾಕು ಇರಿದಿದ್ದರು. ಆರೋಪಿಗಳಲ್ಲಿ ಒಬ್ಬ ಆಟೋ ಚಾಲಕನಾಗಿದ್ದು, ಇನ್ನೊಬ್ಬ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುವವರನಾಗಿದ್ದಾನೆ. ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಸದ್ಯ ಮಾಲೂರು ಪೊಲೀಸ್ ಠಾಣೆ ಬಳಿ ಆರ್​ಎಸ್​ಎಸ್​ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net