

power supply: ದೆಹಲಿಯ ಬೇಗಂಪುರ ಪ್ರದೇಶದಲ್ಲಿ ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು (ಜುಲೈ 31) ಗುರುವಾರ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: https://www.vijayavani.net/are-you-taking-vitamin-d-if-so-dont-make-this-mistake
ವಿವೇಕ್ (26), ಸಹೋದರಿ ಅಂಜು(28) ಮೃತರು. ಅವರ ತಂದೆ ಕಾಳಿಚರಣ್(65) ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಹತ್ತಿರ ಇರುವ ಆಸ್ಪತ್ರೆಗೆ ದಾಖಲಿಸಿದರೂ ವಿವೇಕ್ ಹಾಗೂ ಅಂಜು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇನ್ನು ಕಾಳಿಚರಣ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, 50 ಚದರ ಗಜ ಹೊಂದಿದ ಮನೆಯಲ್ಲಿ ಅಸುರಕ್ಷಿತ ವ್ಯವಸ್ಥೆ ಇದ್ದು, ಕಬ್ಬಿಣದ ಮೆಟ್ಟಿಲುಗಳ ಸುತ್ತಲೂ ವೈರಿಂಗ್ ತೆರೆದುಕೊಂಡಿದ್ದರಿಂದ ಅವಘಡ ಸಂಭವಿಸಿದೆ. ವಿವೇಕ್ ಮಹಡಿ ಹತ್ತಿರ ಇರುವ ಸ್ನಾನಗೃಹದ ಬಳಿ ಹೋಗುತ್ತಿರುವಾಗ ವಿದ್ಯುತ್ ಸ್ಪರ್ಶಿಸಿದ್ದು, ಅದನ್ನು ತಪ್ಪಿಸಲು ಆತನ ತಂದೆ ಕಾಳಿಚರಣ್ ಮುಂದಾಗಿದ್ದು, ಅವರಿಗೂ ವಿದ್ಯುತ್ ತಗುಲಿದೆ. ಇವರಿಬ್ಬರಿಗೂ ಸಹಾಯ ಮಾಡುವ ಯತ್ನದಲ್ಲಿ ಅಂಜು ಕೂಡ ವಿದ್ಯುತ್ ತಗುಲಿದೆ.
ಇದನ್ನೂ ಓದಿ:ಕೋಟದಲ್ಲಿ ಹಸಿರು ಜೀವ ಅಭಿಯಾನ
ವಿವೇಕ್ ತಂದೆಯೊಂದಿಗೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಇನ್ನು ಅಂಜು ಗೃಹಿಣಿಯಾಗಿದ್ದು, 3 ತಿಂಗಳ ಮುಂಚೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಕಟ್ಟಡದ ವಿದ್ಯುತ್ ವ್ಯವಸ್ಥೆಯಲ್ಲಿನ ದೋಷವನ್ನು ಪರಿಶೀಲನೆ ನಡೆಸಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.(ಏಜೆನ್ಸೀಸ್)