

ಕೋಟ: ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಕೋಟದ ರಾಷ್ಟ್ರೀಯ ಹೆದ್ದಾರಿ ಹಾಗೂ ದೇಗುಲ ವಠಾರದಲ್ಲಿ ಹಸಿರು ಜೀವನ ಅಭಿಯಾನ ಭಾನುವಾರ ಆಯೋಜನೆಗೊಂಡಿತು. ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಅಜಿತ್ ದೇವಾಡಿಗ ಚಾಲನೆ ನೀಡಿದರು.
ಕೋಟ ಗ್ರಾ.ಪಂ.ಉಪಾಧ್ಯಕ್ಷ ಪಾಂಡು ಪೂಜಾರಿ ಗಿಡ ಹಸ್ತಾಂತರಿಸಿದರು. ರಾಷ್ಟ್ರೀಯ ಹೆದ್ದಾರಿ ವಿವಿಧ ಭಾಗಗಳಲ್ಲಿ 35ಕ್ಕೂ ಅಧಿಕ ಗಿಡಗಳನ್ನು ನಡೆಲಾಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ ದಿನೇಶ್ ದೇವಾಡಿಗ, ಜಿ.ಎಸ್ ಆನಂದ್ ದೇವಾಡಿಗ, ರಾಜೇಶ್ ದೇವಾಡಿಗ, ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಮಹೇಶ್ ಬೆಳಗಾವಿ ಸ್ವಾಗತಿಸಿದರು. ನಿತೀನ್ ಕುಮಾರ್ ವಂದಿಸಿದರು. ಸುಜಾತಾ ಬಾಯರಿ ನಿರೂಪಿಸಿದರು. ಕೋಟದ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ಗೀತಾನಂದ ಫೌಂಡೇಶನ್, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಬ್ರಹ್ಮಾವರದ ಸುವರ್ಣ ಎಂಟಪ್ರೈಸ್ ಸಹಯೋಗ ವಹಿಸಿದ್ದವು.