ಕುಂದಾಪುರದಲ್ಲಿ ಕಾರ್ಮೆಲ್ ಮಾತೆ ಹಬ್ಬ ಆಚರಣೆ

gan (1)
Published on

ಕುಂದಾಪುರ: ಇಲ್ಲಿನ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರ ವತಿಯಿಂದ ಸಂತ ಜೋಸೆಫ್ ಕಾನ್ವೆಂಟ್ ಪ್ರಾರ್ಥನ ಮಂದಿರದಲ್ಲಿ ಕಾರ್ಮೆಲ್ ಮಾತೆ ಹಬ್ಬ ಬುಧವಾರ ಆಚರಿಸಲಾಯಿತು. ಕಟ್ಕರೆ ಬಾಲ ಯೇಸುವಿನ ಆಶ್ರಮದ ಜೋಸೆಫ್ ಸಿರಿಲ್ ಡಿಸೋಜ ಬಲಿಪೂಜೆ ನೆರವೇರಿಸಿದರು. ಕಾರ್ಮೆಲ್ ಮೇಳದ ಧರ್ಮ ಭಗಿನಿಯರಿಗೆ ಪುನಃ ಪ್ರತಿಜ್ಞಾವಿಧಿ ಮತ್ತು ಅವರಿಗೆ ಸಹಕಾರಿಸುವ ಮಹಿಳೆಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಸಂತ ಜೋಸೆಫ್ ಕಾನ್ವೆಂಟಿನ ಭಗಿನಿಯರು ಹಾಗೂ ಸಹಾಯಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net