ಮದುವೆ ಎರಡೇ ದಿನ ಇರುವಾಗ ಪಾಗಲ್​ ಪ್ರೇಮಿಯ ಗುಂಡೇಟಿಗೆ ಬಲಿಯಾದ 19ರ ಯುವತಿ...

Shoot 4 Jul 20
Published on

ಮೀರತ್​: ಇನ್ನೆರಡು ದಿನದಲ್ಲಿ ಮದುವೆಯಾಗಬೇಕಿದ್ದ 19 ವರ್ಷದ ಯುವತಿಯನ್ನು ಯವಕನೋರ್ವ ಹತ್ಯೆ ಮಾಡಿದ್ದಾನೆ. ಯುವತಿಯನ್ನಷ್ಟೇ ಅಲ್ಲದೆ, ಆಕೆಯ ತಂದೆಯನ್ನೂ ಕೊಂದಿದ್ದಾನೆ.

ಉತ್ತರ ಪ್ರದೇಶದ ಮೀರತ್​​ನ ಟ್ರಾನ್ಸ್​ಪೋರ್ಟ್​ ನಗರದಲ್ಲಿ ಜೂ.27ರಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಯುವಕನನ್ನು ಸಾಗರ್​ ಠಾಕೂರ್​ (27) ಎಂದು ಗುರುತಿಸಲಾಗಿದೆ.

ಯುವತಿ ಅಂಚಲ್​ ಮತ್ತು ಆಕೆಯ ತಂದೆ ರಾಜ್​ಕುಮಾರ್ ಮೃತರಾಗಿದ್ದು, ಅಂಚಲ್​ ಸಹೋದರ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ತನ್ನದೇ ಸೆಕ್ಸ್​ ವಿಡಿಯೋವನ್ನು ಅಶ್ಲೀಲ ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿ, ಅರೆಸ್ಟ್​ ಆದ ಯೂನಿವರ್ಸಿಟಿ ಪ್ರಾಧ್ಯಾಪಕ 

ಸಾಗರ್​ ಮತ್ತು ಅವನ ಸಹಚರರು ಜೂ.27ರಂದು ರಾತ್ರಿ ಒಮ್ಮೆಲೇ ಅಂಚಲ್​ ಮನೆಗೆ ನುಗ್ಗಿ, ಗುಂಡಿನ ದಾಳಿ ನಡೆಸಿದ್ದಾರೆ. ಮೂರ್ನಾಲ್ಕು ಜನರು ಕೂಡಲೇ ಅಲ್ಲಿಂದ ಓಡಿಹೋಗಿ ಪಾರಾಗಿದ್ದಾರೆ. ಆದರೆ ಅಂಚಲ್​ ಮತ್ತು ಆಕೆಯ ಅಪ್ಪ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಯುವತಿ ಅಂಚಲ್ ಅಣ್ಣ ಅಮನ್​ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಆರೋಪಿ ಸಾಗರ್​ಗೆ ಅಂಚಲಳನ್ನು ಮದುವೆಯಾಗುವ ಬಯಕೆ ಇತ್ತು. ಆದರೆ ಆಕೆ ಅವನೊಂದಿಗೆ ವಿವಾಹವಾಗಲು ಒಪ್ಪಿಕೊಂಡಿರಲಿಲ್ಲ. ಆತ ಎಷ್ಟೇ ಬಾರಿ ಕೇಳಿದ್ದರೂ ತಿರಸ್ಕರಿಸಿದ್ದಳು. ಆಕೆ ವಿವಾಹ ಬೇರೆಯವರೊಂದಿಗೆ ನಿಶ್ಚಯವಾಗಿದ್ದನ್ನು ಸಹಿಸಲಾದ ಸಾಗರ್​, ಜೂನ್​ 27ರಂದು ತನ್ನ ಸಹಚರರೊಂದಿಗೆ ಬೈಕ್​​ನಲ್ಲಿ ಆಗಮಿಸಿ, ಮೊದಲು ಅಂಚಲಾಳನ್ನು ಮದುವೆಗೆ ಒಪ್ಪಿಸಲು ಸಿಕ್ಕಾಪಟೆ ಪ್ರಯತ್ನ ಮಾಡಿದರು. ಆದರೆ ಕೊನೆಗೂ ಅವಳು ಒಪ್ಪಿಗೆ ನೀಡದಿದ್ದಾರೆ ಎಲ್ಲರೂ ಸೆರಿ ಕೃತ್ಯ ಎಸಗಿದ್ದಾರೆ ಎಂದು ಅಮನ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು ವಿಚಾರಕ್ಕೆ ಟ್ವಿಸ್ಟ್ ಕೊಟ್ಟ ಸರ್ಜಾ ಕುಟುಂಬದ ಆಪ್ತನ ಹೇಳಿಕೆ

ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಸಾಗರ್​ ನಾಪತ್ತೆಯಾಗಿದ್ದಾನೆ. ಉಳಿದವರನ್ನೂ ಹುಡುಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net