

ಚಂಡಿಗಢ್: ಕರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರನ್ನು ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ದೇಶಾದ್ಯಂತ ಅನೇಕ ಪೊಲೀಸ್ ಸಿಬ್ಬಂದಿ ಕೊವಿಡ್-19ಗೆ ಒಳಗಾಗಿದ್ದಾರೆ. ಒಂದಷ್ಟು ಜನ ಮರಣವನ್ನಪ್ಪಿದ್ದಾರೆ.
ಈ ಮಧ್ಯೆ ಚಂಡಿಗಢ್ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟಂತೆ ಒಂದು ಮಹತ್ವದ ಆದೇಶ ಹೊರಡಿಸಿದೆ.
ಕೊವಿಡ್-19 ಡ್ಯೂಟಿಯಲ್ಲಿರುವ ಪೊಲೀಸ್ ಸಿಬ್ಬಂದಿಗೆ ಆಯುರ್ವೇದ ಆಧಾರಿತ ಔಷಧಿಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತೆ ಸೂಚನೆ ನೀಡಿದೆ. ದೆಹಲಿಯಲ್ಲಿ ಈಗಾಗಲೇ ಪೊಲೀಸರು ಆಯುರ್ವೇದ ಔಷಧಿಯ ಬಳಕೆ ಮಾಡುತ್ತಿದ್ದು, ಇದೀಗ ಅದೇ ಮಾದರಿಯಲ್ಲೇ ಚಂಡೀಗಢ್ ಕೂಡ ಅನ್ವಯಿಸಿಕೊಂಡಿದೆ.
ಮೇ ಪ್ರಾರಂಭದಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆ ದೆಹಲಿ ಪೊಲೀಸರ ಸಹಯೋಗದಲ್ಲಿ ಆಯುರಕ್ಷಾ-ಕರೊನಾ ಸೆ ಜಂಗ್, ದೆಹಲಿ ಪೊಲೀಸ್ ಕೆ ಸಂಗ್ ಎಂಬ ಉಪಕ್ರಮವನ್ನು ಉದ್ಘಾಟಿಸಿತು. ಈ ಯೋಜನೆಯಡಿ ದೆಹಲಿ ಪೊಲೀಸರಿಗೆ ಆಯುರ್ವೇದದ ಮೂರು ವಿಧದ ಮಾತ್ರೆಗಳನ್ನೊಳಗೊಂಡ ಕಿಟ್ ವಿತರಿಸಲಾಗಿತ್ತು. ಕೊವಿಡ್-19 ಡ್ಯೂಟಿಯಲ್ಲಿರುವ ಪೊಲೀಸರು ಈ ಮಾತ್ರೆಗಳನ್ನು ಸೇವಿಸಿ, ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಕಂಬಳಿ ಹೊದ್ದು ಮಲಗಿ ಬೇಬಿ ಬಂಪ್ ವಿಡಿಯೋ ಮಾಡಿದ ಮಹಿಳೆ; ಬಳಿಕ ಆ ವಿಡಿಯೋ ನೋಡಿ ನಲುಗಿಹೋದರು…
ಇದೀಗ ಚಂಡೀಗಢ್ ಪೊಲೀಸ್ ಇಲಾಖೆ ಕೂಡ ಇದೇ ಮಾದರಿಯ ಕಿಟ್ ಹೊರತಂದಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸ್ ಇಲಾಖೆ ಹೊರತಂದ ಆಯುರ್ವೇದ ಕಿಟ್ ಮಾದರಿಯಲ್ಲಿಯೇ ನಮ್ಮಲ್ಲಿಯೂ ರೋಗನಿರೋಧಕ ಶಕ್ತಿ ಉತ್ತೇಜಿಸುವ ಆಯುರ್ವೇದ ಮಾತ್ರೆಗಳನ್ನು ಹೊರತರಲಾಗಿದೆ. ಇದನ್ನೂ ಓದಿ: ನೆಟ್ಸ್ನಲ್ಲಿ ಸುನೀಲ್ ಗಾವಸ್ಕರ್ ಕೆಟ್ಟ ಬ್ಯಾಟ್ಸ್ಮನ್ ಎಂದು ಕಿರಣ್ ಮೋರೆ ಹೇಳಿದ್ಯಾಕೆ..!
ಸೆಕ್ಟರ್ 26ರ ಆಸ್ಪತ್ರೆಯಲ್ಲಿ ಈ ಮಾತ್ರೆಗಳ ವಿತರಣೆ ಮಾಡಲಾಗುವುದು. ಮಾತ್ರೆಗಳನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಅದೇ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವಿವರಿಸುತ್ತಾರೆ. ಕೊವಿಡ್-19 ಕರ್ತವ್ಯ ನಿರತ ಎಲ್ಲ ಪೊಲೀಸರಿಗೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)