ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು ವಿಚಾರಕ್ಕೆ ಟ್ವಿಸ್ಟ್ ಕೊಟ್ಟ ಸರ್ಜಾ ಕುಟುಂಬದ ಆಪ್ತನ ಹೇಳಿಕೆ

Dhruva sarja
Published on

ಬೆಂಗಳೂರು: ಸಹೋದರ ಚಿರಂಜೀವಿ ಸರ್ಜಾರ ಅಕಾಲಿಕ ನಿಧನದಿಂದ ಮಾನಸಿಕವಾಗಿ ಕುಗ್ಗಿರುವ ನಟ ಧ್ರುವ ಸರ್ಜಾ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸರ್ಜಾ ಕುಟುಂಬದ ಆಪ್ತರೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸರ್ಜಾ ಕುಟುಂಬದ ಆಪ್ತ ಶಿವಾರ್ಜುನ ಎಂಬುವರು ವಿಜಯವಾಣಿಗೆ ಮಾಹಿತಿ ನೀಡಿದ್ದು, ‘ಬಿಪಿ ಏರುಪೇರು ಮತ್ತು ಖಿನ್ನತೆಯಿಂದ ನನಗೆ ಹುಷಾರಿರಲಿಲ್ಲ. ನನ್ನನ್ನು ಆಸ್ಪತ್ರೆಗೆ ದಾಖಲಿಸಲು ಧ್ರುವ ಬಂದಿದ್ದ. ನಾನೂ ಈಗಾಗಲೇ ಚೇತರಿಸಿಕೊಂಡಿದ್ದೇನೆ. ನಾಳೆ ಡಿಸ್ಚಾರ್ಜ್ ಮಾಡಲಿದ್ದಾರೆ. ಧ್ರುವ ಅವರಿಗೆ ಏನೂ ಆಗಿಲ್ಲ‘ ಎಂದು ಮಾಹಿತಿ ನೀಡಿದ್ದಾರೆ.

ಸುದ್ದಿ ಹರಿದಾಡಿದ್ದೇನು?

ಎರಡು ದಿನಗಳ ಹಿಂದೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಧ್ರುವ ಚಿಕಿತ್ಸೆಯ ಬಳಿಕ ಇಂದು ಬಿಡುಗಡೆಯಾಗಿದ್ದಾರೆ. ಧ್ರುವ ಸರ್ಜಾ ಪೋಷಕರಿಗೂ ಅನಾರೋಗ್ಯ ಕಾಡಿದ್ದು, ಇದರಿಂದಲೂ ಧ್ರುವ ಮತ್ತಷ್ಟು ಕುಗ್ಗಿಹೋಗಿದ್ದರು. ಇದೀಗ ಮನೆಗೆ ತೆರಳಿರುವ ಧ್ರುವರಿಗೆ ಮಾವ ಅರ್ಜುನ್ ಸರ್ಜಾ ಕುಟುಂಬದ ಜೊತೆಗಿದ್ದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಯಾರೂ ಮನೆಯ ಬಳಿ ಬರಬೇಡಿ ಎಂದು ಸರ್ಜಾ ಕುಟುಂಬ ಮನವಿ ಮಾಡಿದೆ ಎಂದು ಈ ಮೊದಲು ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net