ಕಿಚ್ಚನ ಟ್ವೀಟ್​ಗೆ ಸಚಿನ್​ ಸ್ವೀಟ್​ ರಿಪ್ಲೈ; ಜಸ್ಟ್​ ಲುಕ್ಕಿಂಗ್​ ಲೈಕ್​ ಎ ವಾವ್​ ಎಂದ ಫ್ಯಾನ್ಸ್​

Sudeep Tendulkar
Published on

ಬೆಂಗಳೂರು: ನಟ ಕಿಚ್ಚ ಸುದೀಪ್​ ನಟನೆಯ ಜೊತೆಜೊತೆಗೆ ಕ್ರೀಡೆಯಲ್ಲೂ ತಮನ್ನು ತಾವು ಹೆಚ್ಚು ಗುರುತಿಸಿಕೊಂಡಿದ್ದಾರೆ. ಸಿಸಿಎಲ್ ಸೇರಿದಂತೆ ಇನ್ನಿತರೆ ಟೂರ್ನಿಗಳ ಮೂಲಕ ಕ್ರಿಕೆಟ್​ ಮೇಲಿನ ಪ್ರೀತಿಯನ್ನು ತೋರುತ್ತಲೇ ಬಂದಿದ್ದಾರೆ. ಚಿತ್ರರಂಗ ಮಾತ್ರವಲ್ಲದೇ ಕ್ರೀಡಾ ವಲಯದಲ್ಲೂ ಹಲವು ಆಪ್ತರನ್ನು ಹೊಂದಿರುವ ನಟ ಸುದೀಪ್​ ತಮ್ಮ ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತಾರೆ.

#AskKichcha ಎಂಬ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಮೂಲಕ ಅಭಿಮಾನಿಗಳು ತಮಗೆ ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಿರುತ್ತಾರೆ. ಇಂದು ಅಂಥಹುದೇ ಒಂದು ಸಂವಾದದಲ್ಲಿ ಅಭಿಮಾನಿಯೊಬ್ಬರು, ಸುದೀಪ್ ಹಾಗೂ ಸಚಿನ್ ಅವರು ಒಟ್ಟಿಗಿರುವ ಹಳೆಯ ಚಿತ್ರವನ್ನು ಶೇರ್ ಮಾಡಿ ನೀವು ಸಚಿನ್​ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ ನಿಮ್ಮ ಭಾವನೆ ಏನಾಗಿತ್ತು ಎಂದು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್​ ಜಸ್ಟ್​ ಲುಕ್ಕಿಂಗ್​ ಲೈಕ್​ ಎ ವಾವ್​ ಒಂದು ಸವಿ ನೆನಪು ಗೆಳೆಯ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ತಕ್ಷಣವೇ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ನಿಮ್ಮನ್ನು ಭೇಟಿಯಾಗಿದ್ದು, ಸಂತೋಷವಾಯಿತು ಮತ್ತು ಆ ದಿನ ಯಾರೋ ನಮ್ಮ ಈ ಫೋಟೋವನ್ನು ತೆಗೆದರು, ಅದು ತುಂಬಾ ಸುಂದರವಾದ ಚಿತ್ರವಾಗಿತ್ತು. ಯಾವಾಗಲೂ ನಿಮಗೆ ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ಸಂತೋಷವನ್ನು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಚಿನ್​ರ ಈ ಪ್ರತಿಕ್ರಿಯೆಯನ್ನು ನಿರೀಕ್ಷಿಸದಿದ್ದ ಸುದೀಪ್, ‘ವಾವ್, ನಾನಿದನ್ನು ನಿರೀಕ್ಷಿಸಿಯೇ ಇರಲಿಲ್ಲ. ಮತ್ತೊಂದು ಅದ್ಭುತವಾದ ನೆನಪನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದ. ರಾಶಿ ಪ್ರೀತಿ ಹಾಗೂ ಶುಭ ಹಾರೈಕೆಗಳು ನಿಮಗೆ’ ಎಂದು ಸಚಿನ್​ಗೆ ಧನ್ಯವಾದ ಹೇಳಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರ ಟ್ವೀಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net