More

    ’12th ಫೇಲ್’​ ಯಶಸ್ಸಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ನಾಯಕ ನಟ; ಕಾರಣ ಹೀಗಿದೆ

    ಮುಂಬೈ: ವಿಧು ವಿನೋದ್​ ಚೋಪ್ರಾ ನಿರ್ದೇಶನದ ವಿಕ್ರಾಂತ್​ ಮ್ಯಾಸ್ಸೆ, ಮೇಧಾ ಶಂಕರ್​ ನಟನೆಯ ನಿಜ ಜೀವನ ಆಧಾರಿತ 12ತಹ ಫೇಲ್​ ಚಿತ್ರವು ಪ್ರೇಕ್ಷಕರು, ವಿಮರ್ಶಕರು ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಯಶಸ್ಸಿನ ನಡುವೆಯೇ ನಾಯಕ ನಟ ವಿಕ್ರಾಂತ್​ ಮ್ಯಾಸ್ಸೆ ನಿವೃತ್ತಿಯ ಮಾತುಗಳನ್ನು ಆಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್​ ಆಗಿದೆ.

    ಬಾಲಿವುಡ್​ ನಟರಾದ ಹೃತಿಕ್​ ರೋಷನ್​, ಜಾಹ್ನವಿ ಕಪೂರ್​, ಕಂಗನಾ ರಣಾವತ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ಹಾಡಿ ಹೊಗಳಿದ್ದರು. ಇತ್ತೀಚಿಗೆ ಸಿನಿಮಾ ವೀಕ್ಷಿಸಿದ ನಟಿ ಕರೀನಾ ಕಪೂರ್​ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು ಮತ್ತು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದರು. ಇದರ ಬೆನ್ನಲ್ಲೇ ನಾಯಕ ನಟ ವಿಕ್ರಾಂತ್​ ಮ್ಯಾಸ್ಸೆ ನಿವೃತ್ತಿ ಪಡೆಯುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

    12th fail

    ಇದನ್ನೂ ಓದಿ: ಸೋಲೊಪ್ಪಿಕೊಳ್ತಾ ಕಾಂಗ್ರೆಸ್​?; ಈ ಬಾರಿ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

    12th ಫೇಲ್​ ಸಿನಿಮಾದ ನಿರ್ದೇಶಕ ವಿಧು ವಿನೋದ್​ ಚೋಪ್ರಾ, ನಟರಾದ ವಿಕ್ರಾಂತ್​ ಮಾಸ್ಸಿ, ಮೇಧಾ ಶಂಕರ್​, ಅಂಶುಮಾನ್​ ಪುಷ್ಕರ್​, ಅನಂತ್​ ವಿ. ಜೋಶಿ ಮತ್ತು ಇಡೀ ಪಾತ್ರವರ್ಗದವರು ಲೆಜೆಂಡ್​ಗಳು ಎಂದು ಕರೀನಾ ಕಪೂರ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಾಯಕ ನಾಟ ವಿಕ್ರಾಂತ್​ ಮ್ಯಾಸ್ಸೆ ನಾನು ಈಗ ನಿವೃತ್ತಿ ಪಡೆಯಬಹುದು. ಧನ್ಯವಾದಗಳು ಮೇಡಂ ಹೇಳಿದ್ದರು.

    ಒಂದಷ್ಟು ದಿನಗಳ ಹಿಂದೆ ಕರೀನಾ ಕಪೂರ್​ ಖಾನ್​ ಮತ್ತು ವಿಕ್ರಾಂತ್​ ಮಾಸ್ಸಿ ಅವರು ಜೊತೆಯಾಗಿ ಒಂದು ಸಂದರ್ಶನದಲ್ಲಿ ಭಾಗಿ ಆಗಿದ್ದರು. ಆಗ ಕರೀನಾ ಕಪೂರ್​ ಬಗ್ಗೆ ತಮಗೆ ಇರುವ ಅಭಿಮಾನ ಎಂಥದ್ದು ಎಂಬುದನ್ನು ವಿಕ್ರಾಂತ್​ ಮಾಸ್ಸಿ ವಿವರಿಸಿದ್ದರು. ಈಗ ತಮ್ಮ ಇಷ್ಟದ ನಟಿಯಿಂದಲೇ ಮೆಚ್ಚುಗೆ ಸಿಕ್ಕಿರುವುದಕ್ಕೆ ವಿಕ್ರಾಂತ್​ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts