More

    VIDEO: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು!

    ಕರೊನಾ ಸಂಕಷ್ಟದಿಂದಾಗಿ ವರ್ಕ ಫ್ರಮ್​ ಅನಿವಾರ್ಯವಾಗಿದೆ. ಜತೆಗೆ, ಇದನ್ನು ನಿಭಾಯಿಸುವುದು ಸವಾಲಿನ ಕೆಲಸವೂ ಆಗಿದೆ. ಇದರಿಂದ ಹಲವು ಅವಾಂತರಗಳು ಉಂಟಾಗಿವೆ.

    ಅದರಲ್ಲೂ ನೇರ ಪ್ರಸಾರದಲ್ಲಿ ಭಾಗಿಯಾಗುವುದು ಇನ್ನೂ ಕಷ್ಟದ ಕೆಲಸ ಕೆಲಸ. ನಮ್ಮ ಹಿಂದೆ ಏನಾಗುತ್ತಿದೆ ಎಂಬುದರ ಅರಿವು ನಮಗಾಗಾದಿದ್ದರೂ, ಅದನ್ನು ನೋಡುತ್ತಿರುವವರಿಂದ ಬಚಾವಾಗುವುದು ಕಷ್ಟ. ಕೆಲವೊಮ್ಮೆ ಸಾಕುಪ್ರಾಣಿಗಳು ಅಡ್ಡಿಪಡಿಸಿದರೆ, ಮಕ್ಕಳು ಕೀಟಲೆ ಮಾಡಿರುತ್ತಾರೆ. ಯಾವ್ಯಾವುದೋ ಭಂಗಿಯಲ್ಲಿರುವ ಕುಟುಂಬದ ಸದಸ್ಯರೆಲ್ಲ ಲೈವ್​ನಲ್ಲಿ ಕಾಣಿಸಿಕೊಂಡಿದ್ದು ಉಂಟು…!

    ಇದನ್ನೂ ಓದಿ; ಕೋವಿಡ್​ಗೆ ಲಸಿಕೆ ಮದ್ದಲ್ಲ, ಸದ್ಯಕ್ಕೆ ಸಿಗೋದು ಇಲ್ಲ; ಪ್ರಧಾನಿಗೆ ಪತ್ರ ಬರೆದ ಆರೋಗ್ಯ ತಜ್ಞರು 

    ಅಂಥದ್ದೇ ಪೇಚಿನ ಪ್ರಸಂಗವೊಂದನ್ನು ಬ್ರೆಜಿಲ್​ ಟಿವಿ ಆ್ಯಂಕರ್​ ಪತ್ನಿ ಎಡವಟ್ಟು ಮಾಡಿಕೊಂಡಿದ್ದಾಳೆ. ಪತಿ ಲೈವ್​ನಲ್ಲಿ ಇದ್ದಾನೆ ಎಂಬುದು ಗೊತ್ತಿದ್ದರೂ, ಆತನ ಹಿಂದಿನಿಂದ ಬಗ್ಗಿ ಮತ್ತೊಂದು ಕಡೆ ಹೋಗಿದ್ದಾಳೆ. ಇಷ್ಟೇ ಆಗಿದ್ದರೆ ಅಂಥ ಅಪಾರ್ಥವಾಗುತ್ತಿರಲಿಲ್ಲವೇನೋ. ಆಕೆ ಸಂಪೂರ್ಣ ಬೆತ್ತಲಾಗಿದ್ದಳು ಎಂಬುದು ಆ ವಿಡಿಯೋದಲ್ಲಿ ಗೊತ್ತಾಗುತ್ತದೆ….!

    ಬ್ರೆಜಿಲ್​ ಟಿವಿಯೊಂದರ ಆ್ಯಂಕರ್​ ಹಾಗೂ ನಟ ಫ್ಯಾಬಿಯೋ ಫೊರ್ಚಾಟ್​ ಅಲ್ಲಿನ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿದ್ದ ಗಿಲ್​ಹರ್ಮೆ ಬೋಲಸ್​ ಎಂಬುವರ ಜತೆ ಸಂವಾದ ನಡೆಸುತ್ತಿದ್ದ.  ಕ್ಯಾಮರಾದಲ್ಲಿ ಕಾಣಿಸಬಾರದೆಂದು ಆದಷ್ಟೂ ಪ್ರಯತ್ನ ಫ್ಯಾಬಿಯೋ ಪತ್ನಿ ನಟಾಲಿ ಬಗ್ಗಿಕೊಂಡು ಆತನ ಹಿಂದಿನಿಂದ ಸಾಗುತ್ತಾಳೆ. ನಗು ತಡೆದುಕೊಳ್ಳಲಾಗದೇ ಬೋಲಸ್​, ನಿನ್ನ ಹಿಂದೆ ಯಾರೋ ಬೆತ್ತಲಾಗಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ವಿಡಿಯೋ: ಮೊಸಳೆಗೂ ಬೇಸರ….! ಮಾಂಸದ ತುಂಡು ಹಿಡಿಯಲಾಗದ್ದಕ್ಕೆ ಕೋಪಿಸಿಕೊಂಡು ನೀರಿಗಿಳಿಯಿತು…! 

    ಅಚ್ಚರಿಗೆ ಒಳಗಾದ ಫ್ಯಾಬಿಯೋ ಎಲ್ಲರೂ ನಿನ್ನನ್ನು ನೋಡಿದ್ರು ಎಂದು ಪತ್ನಿಗೆ ಹೇಳುತ್ತಾನೆ. ಈಗ ಅಚ್ಚರಿ ಪಡುವ ಸರದಿ ನಟಾಲಿಯಾದ್ದು. ನಾನು ಅಲ್ಲಿ ಕಾಣಸಿದ್ನಾ ಎಂದು ಮರು ಪ್ರಶ್ನಿಸಿಸ್ತಾಳೆ. ಹೌದು ಎಲ್ಲರೂ ನಿನ್ನನ್ನು ನೋಡಿದ್ದಾರೆ. ಬೋಲಸ್​ ಕೂಡ ನೋಡಿದ್ದಾರೆ ಎಂದು ಉತ್ತರಿಸುತ್ತಾನೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts