

ಸಾಕುಪ್ರಾಣಿಗಳೊಂದಿಗೆ ಆಟವಾಡೋದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅಂತೆಯೇ ಕೆಲವರು ಕಾಡುಪ್ರಾಣಿಗಳೊಂದಿಗೆ ಅಷ್ಟೇ ಸಲೀಸಾಗಿ ನಡೆದುಕೊಳ್ಳುತ್ತಾರೆ.
ಅಮೆರಿಕ ಫ್ಲೋರಿಡಾದ ಎವರ್ಗ್ಲೇಡ್ಸ್ ಹಾಲಿಡೇ ಪಾರ್ಕ್ನಲ್ಲಿರುವ ಮೊಸಳೆಯ ವಿಡಿಯೋವೊಂದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾಲೀಕ ನೀಡಿದ ಮಾಂಸದ ತುಣುಕನ್ನು ಹಿಡಿಯಲಾಗದ ಮೊಸಳೆ ಬೇಸರಿಸಿಕೊಂಡು, ಅದನ್ನು ನೆಲದ ಮೇಲೆ ಬಿಟ್ಟು ನೀರಿಗಿಳಿಯುತ್ತದೆ.
ಸೆವೆನ್ ಎಂದು ಕರೆಯಲಾಗುವ ಮೊಸಳೆ ಜತೆಗೆ ಯುವಕ ಹಾಗೂ ಯುವತಿ ಆಟವಾಡುತ್ತಿರುತ್ತಾರೆ. ಆಗ ಯುವಕನ ಕೈಯಲ್ಲಿದ್ದ ಮಾಂಸದ ತುಂಡನ್ನು ಮೊಸಳೆಗೆ ಹಿಡಿಯಲಾಗುವುದಿಲ್ಲ. ಆತ ಮಾಂಸದ ತುಂಡನ್ನು ಕೈಬಿಟ್ಟಾಗ ಅದರ ಬಾಯಿಗೆ ಬೀಳದೇ ನೆಲದ ಪಾಲಾಗುತ್ತದೆ. ಇದರಿಂದ ಅವಮಾನಕ್ಕೊಳಗಾದೆ ಎಂಬಂತೆ ಮೊಸಳೆ ಅದರತ್ತ ನೋಡದೆ ನೀರಿಗಿಳಿಯುತ್ತದೆ.
ಪ್ರಾಣಿಗಳು ಯಾವುದೇ ಇರಲಿ ಅವುಗಳ ವರ್ತನೆ ಕೂಡ ಅಷ್ಟೇ ವಿಶಿಷ್ಟವಾಗಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜತೆಗೆ, ನೆಟ್ಟಿಗರ ಪ್ರಶಂಸೆಗೂ ಪಾತ್ರವಾಗಿದೆ.