

ಪಟ್ನಾ: ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಗಳಿಗೆ ಜನರ ನಡುವೆ ಗಲಾಟೆಯಾಗುತ್ತಿದ್ದು, ಆಗಿಂದಾಗೆ ಇದು ಸಖತ್ ಸೌಂಡ್ ಮಾಡುತ್ತಿರುತ್ತವೆ. ಇದೀಗ ರೈಲಿನಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಜೊತೆ ಜಗಳವಾಡಿ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮಹಿಳೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಆಕೆಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಜನರಿಂದ ತುಂಬಿರುವ ರೈಲಿನಲ್ಲಿ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದು, ತಾವು ಸ್ಲೀಪರ್ ಕೋಚ್ನಲ್ಲಿ ರಿಸರ್ವ್ ಮಾಡಿದ ಸೀಟಿನಲ್ಲಿ ಮಲಗಿದ್ದಾರೆ. ಈ ವೇಳೆ ರೈಲು ಹತ್ತುವ ಮಹಿಳೆಯೊಬ್ಬರು ವ್ಯಕ್ತಿಗೆ ಜರುಗುವಂತೆ ಹೇಳುತ್ತಾಳೆ. ಅದಕ್ಕೆ ಆತ ಒಪ್ಪದಿದ್ದಾಗ ನಿನ್ನನ್ನು ನೀನಿ ಏನೆಂದುಕೊಂಡಿದ್ದೀಯಾ ಈ ಟ್ರೈನ್ ಏನು ನಿಮ್ಮ ಅಪ್ಪನ ಮನೆ ಆಸ್ತೀನಾ ಎಂದು ಮಹಿಳೆ ಜಗಳ ಶುರು ಮಡುತ್ತಾಳೆ. ವ್ಯಕ್ತಿ ಉತ್ತರಕ್ಕೆ ಮತ್ತಷ್ಟು ಸಿಟ್ಟಿಗೆದ್ದ ಮಹಿಳೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಟಿಕೆಟ್ ತೋರಿಸು ಎಂದು ಪ್ರಶ್ನಿಸುತ್ಥಾಳೆ. ಬಳಿಕ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ನಡೆಗೆ ಹಲವರು ಕಿಡಿಕಾರಿದ್ದಾರೆ. ಈ ರೀತಿಯ ನಿಂದನೀತಯ ಭಾಷೆ ಸ್ವೀಕಾರ್ಹಾವಲ್ಲ. ಇದನ್ನು ನೋಡುತ್ತಿರುವ ಜನ ಗಲಾಟೆಯನ್ನು ನಿಲ್ಲಿಸದೆ ಫೋನಿನಲ್ಲಿ ರೆಕಾರ್ಡ್ ಮಾಡುತ್ತಿರುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸೀಟಿಗಾಗಿ ಇವರಿಬ್ಬರ ಕಿತ್ತಾಟ ರೈಲಿನಲ್ಲಿದ್ದವರಿಗೆ ಭರ್ತಿ ಮನರಂಜನೆ ನೀಡಿದೆ.