

ಕೊಲಂಬೊ: ಭಾರತ ವುಮೆನ್ಸ್ ಕ್ರಿಕೆಟ್ ತಂಡದ ಯುವ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಮಹಿಳಾ ಏಷ್ಯಾಕಪ್ ಟೂರ್ಇಯಿಂದ ಹೊರಬಿದ್ದಿದ್ದಾರೆ. ಬೆರಳಿನ ಮೂಳೆ ಮುರಿತದಿಂದಾಗಿ ಅವರು ಹೊರಬಿದ್ದಿದ್ದು, ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು ಎಂದು ವರದಿಯಾಗಿದೆ. ಈ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯನ್ನು ಹೊರಡಿಸಿದೆ.
ಪಾಕಿಸ್ತಾನ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 3.4 ಓವರ್ ಬೌಲಿಂಗ್ ಮಾಡಿದ ಶ್ರೇಯಾಂಕಾ ಪಾಟೀಲ್ 14 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು. ಇದೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಶ್ರೇಯಾಂಕಾ ಗಾಯಕ್ಕೆ ತುತ್ತಾಗಿದ್ದರು. ಶ್ರೇಯಾಂಕಾ ಅವರ ಎಡಗೈನ ನಾಲ್ಕನೇ ಬೆರಳಿನ ಮೂಳೆ ಮುರಿದಿದ್ದು, ಹೀಗಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶ್ರೇಯಾಂಕಾ ಪಾಟೀಲ್ ಏಷ್ಯಾಕಪ್ನಿಂದ ಹೊರಬೀಳುತ್ತಿದ್ದಂತೆ ಬದಲಿ ಆಟಗಾರ್ತಿಯಾಗಿ ತನುಜಾ ಪಾಟೀಲ್ ಅವರನ್ನು ನೇಮಿಸಲಾಗಿದೆ. ಏಷ್ಯಾಕಪ್ಗಾಗಿ ಹೆಸರಿಲ್ಪಟ್ಟ ತಂಡದಲ್ಲಿ ತನುಜಾ ಮೀಸಲು ಆಟಗಾರ್ತಿಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸ್ಪಿನ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಹೊರಗುಳಿದಿರುವ ಕಾರಣ ತನುಜಾ ಕನ್ವರ್ ಅವರನ್ನು ಬದಲಿ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ.