

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಬುಧವಾರ ತುಳಸಿಪೂಜೆ ಆಚರಿಸಲಾಯಿತು.
ಶಾಲೆ ವಿದ್ಯಾರ್ಥಿಗಳು ದೀಪ ಬೆಳಗಿಸಿ, ತುಳಸಿ ಮತ್ತು ಕಾರ್ತಿಕ ದಾಮೋದರರನ್ನು ವಿಷ್ಣು ಸಹಸ್ರನಾಮ ಶ್ಲೋಕ ಪಠಣೆ, ಭಜನೆಗಳ ಮೂಲಕ ಆರಾಧಿಸಿದರು. ಶ್ರೀನಿವಾಸ ಶೇಟ್ ಕುಂದಾಪುರ ಭಜನೆ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಅಧ್ಯಾಪಕ ರಾಮಕೃಷ್ಣ ಉಡುಪ ತುಳಸಿ ಪೂಜೆ ನೆರವೇರಿಸಿದರು. ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿಯಂಗಡಿಯ ಕಾರ್ಯದರ್ಶಿ, ಪ್ರಾಂಶುಪಾಲ ಶರಣಕುಮಾರ, ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕ, ಶಿಕ್ಷಕೇತರರು ಉಪಸ್ಥಿತರಿದ್ದರು.