

ಹೆಬ್ರಿ: ಹೆಬ್ರಿಯಲ್ಲಿ ಅಮೃತ ಭಾರತಿ ಎನ್ನುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಇದೆ ಎಂದು ಕೇಳಿ ತಿಳಿದಿದ್ದೆ. ಸಂಸ್ಥೆಗೆ ಪ್ರಥಮ ಬಾರಿ ಭೇಟಿಕೊಟ್ಟು ಭಾವಪರವಶನಾದೆ. ಜತೆಗೆ ನಮ್ಮ ಬ್ಯಾಂಕ್‌ನ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಸಿಎಸ್‌ಆರ್ ಫಂಡನ್ನು ಸಂಸ್ಥೆಗೆ ನೀಡಿದ್ದಕ್ಕೆ ಸಾರ್ಥಕ್ಯ ಭಾವ ಮೂಡಿದೆ ಎಂದು ಕರ್ಣಾಟಕ ಬ್ಯಾಂಕ್ ರೀಜನಲ್ ಆಫೀಸ್ ಎಜಿಎಂ ವಾದಿರಾಜ್ ಭಟ್ ಹೇಳಿದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿಗೆ ಕರ್ಣಾಟಕ ಬ್ಯಾಂಕ್‌ನವರ ಸಿಎಸ್‌ಆರ್ ಫಂಡ್‌ನಿಂದ ಕೊಡಮಾಡಿದ ಆಡಿಟೋರಿಯಂ ಹಾಗೂ ಸೌರ ವಿದ್ಯುತ್ ಘಟಕ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ಕರ್ಣಾಟಕ ಬ್ಯಾಂಕ್ ಕಾರ್ಕಳ ಶಾಖಾ ಪ್ರಬಂಧಕ ಮೂರ್ತಿ ಸಿ.ಕೆ., ಹೆಬ್ರಿ ಶಾಖಾ ಪ್ರಬಂಧಕ ಗಣೇಶ್ ನಾಯಕ್, ಪ್ರಾಂಶುಪಾಲ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.