

TTD: ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡುವ ಹಿನ್ನಲೆ ಇದೀಗ ದೇವಾಲಯದ ಆಡಳಿತ ಮಂಡಳಿ ಇಂದಿನ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ತಿರುಮಲಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚು ಅನುಕೂಲವಾಗುವ ಕ್ರಮಗಳನ್ನು ತೆಗೆದುಕೊಳ್ಳಲು ಟಿಟಿಡಿ ಚರ್ಚಿಸಿದೆ.
ಪಾದಯಾತ್ರೆಯ ಮಾರ್ಗಗಳಲ್ಲಿ ದೇಗುಲಕ್ಕೆ ಆಗಮಿಸುವ ಭಕ್ತರು ಹೆಚ್ಚು ಸಮಯ ಕಾಯದಂತೆ ವ್ಯವಸ್ಥೆ ಜಾರಿಗೊಳಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಮತ್ತೊಂದೆಡೆ, ಟಿಟಿಡಿಯಲ್ಲಿ ಸೈಬರ್ ಭದ್ರತೆಯನ್ನು ಸ್ಥಾಪಿಸಲು ಗ್ರೀನ್ ಸಿಗ್ನಲ್ ಲಭಿಸಿದೆ. 600 ವೇದ ವಿದ್ವಾಂಸರಿಗೆ ನಿರುದ್ಯೋಗ ಭತ್ಯೆ ನೀಡಲು ಮತ್ತು 750 ವೇದ ಪಠಣಕಾರರನ್ನು ನೇಮಿಸಲು ಮಂಡಳಿ ನಿರ್ಧರಿಸಿದೆ. ಇನ್ನೂ ತಿರುಮಲದಲ್ಲಿ ಹಳೆಯ ರಚನೆಗಳನ್ನು ತೆಗೆದುಹಾಕಿ ಹೊಸದನ್ನು ನಿರ್ಮಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.
ಭಕ್ತರು ಅಧಿಕ ಸಂಖ್ಯೆಯಲ್ಲಿ ವಾರಾಂತ್ಯಗಳಲ್ಲಿ ಮತ್ತು ಹಬ್ಬಗಳ ಸಮಯದಲ್ಲಿ ದೇವಾಲಯಕ್ಕೆ ಆಗಮಿಸುತ್ತಾರೆ. ಈ ವೇಳೆ ಸರದಿಯಲ್ಲಿ ಹೆಚ್ಚು ಸಮಯ ಕಾಯುತ್ತಾರೆ. ಹಲವು ಸಂದರ್ಭಗಳಲ್ಲಿ 8ರಿಂದ 10 ಗಂಟೆಗಳ ಕಾಲ ನಿಂತು ತಿಮ್ಮಪ್ಪನ ದರ್ಶನ ಪಡೆದ ಘಟನೆಗಳಿವೆ. ಇದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಂಡಿರುವ ಟಿಟಿಡಿ, ಸರತಿ ಸಾಲುಗಳು ವರ್ಷಕ್ಕೆ ಕೆಲವೇ ಬಾರಿ ತೆರೆದಿರುತ್ತವೆ. ಇದಕ್ಕಾಗಿ ಎಷ್ಟು ಹಣವನ್ನು ಖರ್ಚು ವ್ಯಯಿಸಲಾಗುತ್ತಿದೆ ಮತ್ತು ಅದು ಉಪಯುಕ್ತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಒಂದು ಸಮಿತಿಯನ್ನು ರಚಿಸುತ್ತೇವೆ. ಜೊತೆಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದೆ.
"300 ರೂ. ಟಿಕೆಟ್ ಖರೀದಿಸಿದವರು ಮತ್ತು ಶ್ರೀವಾಣಿ ಟಿಕೆಟ್ ಖರೀದಿಸಿದವರು ಸಹ ಸರತಿ ಸಾಲಿನಲ್ಲಿ ಕಾಯುವಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಈ ಭಕ್ತಾಧಿಗಳು ಎಲ್ಲಿ ಕಾಯಬೇಕು? ಅವರೆಲ್ಲರಿಗೂ ಯಾವುದೇ ವಸತಿ ಇಲ್ಲ. ಕಾಯಲು ಅಥವಾ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಅನೇಕರು ಮೆಟ್ಟಿಲುಗಳು ಮತ್ತು ನಡಿಗೆ ಮಾರ್ಗಗಳಲ್ಲಿ ಸಾಗುತ್ತಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ಸಹ ಒದಗಿಸಬೇಕಾಗಿದೆ. ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ" ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ಹೇಳಿದ್ದಾರೆ.
"ಮುಖ್ಯವಾಗಿ, ತಿರುಮಲದಲ್ಲಿ ಭಕ್ತರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಎರಡು ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ಗಳಿವೆ. ಮೂರನೇ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸುವ ಅಗತ್ಯವಿದೆಯೇ? ಅಥವಾ ಇಲ್ಲವೇ? ಈ ಕುರಿತು ಸಮಿತಿ ರಚಿಸಲು ನಿರ್ಧರಿಸಿದ್ದೇವೆ. ಎರಡು ನಡಿಗೆ ಮಾರ್ಗಗಳಲ್ಲಿ (ಅಲಿಪಿರಿ ಮೆಟ್ಟಿಲು ಮತ್ತು ಶ್ರೀವರಿ ಮೆಟ್ಟಿಲು) ಭಕ್ತರು ಯಾವುದೇ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳಲು ಮತ್ತು ವಸತಿ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಇನ್ನು ಟಿಟಿಡಿ ಹೆಸರಿನಲ್ಲಿ ಹಲವು ನಕಲಿ ವೆಬ್ಸೈಟ್ಗಳು ಚಾಲ್ತಿಯಲ್ಲಿವೆ. ಈ ಬಗ್ಗೆ ಫೇಕ್ ಸುದ್ದಿ ಹರಡುವವರನ್ನು ಗುರುತಿಸಲು ನಮ್ಮದೇ ಆದ ಸೈಬರ್ ಭದ್ರತೆಯನ್ನು ಸ್ಥಾಪಿಸಲು ಆಡಳಿತ ಮಂಡಳಿ ಇಂದಿನ ಸಭೆಯಲ್ಲಿ ನಿರ್ಧರಿಸಿದೆ. ಟಿಟಿಡಿಯಲ್ಲಿ ಧಾರ್ಮಿಕೇತರ ಉದ್ಯೋಗಿಗಳ ಮೇಲೆ ಕಣ್ಗಾವಲು ಹೆಚ್ಚಿಸಲು ಮತ್ತು ಅವರನ್ನು ನಿರ್ಲಕ್ಷಿಸದಿರಲು ಕೂಡ ನಿರ್ಧರಿಸಲಾಗಿದೆ. ಇತರ ಧರ್ಮಗಳನ್ನು ಅನುಸರಿಸುವ ಜನರು ಹುಂಡಿಯಿಂದ ಉಡುಗೊರೆಗಳನ್ನು ಸಂಬಳವಾಗಿ ಪಡೆಯುವುದನ್ನು ನಾವು ಸಹಿಸುವುದಿಲ್ಲ" ಎಂದು ಟಿಟಿಡಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).