ನೀರಿನ ಸಮಸ್ಯೆಯಿಂದ ಬೇಸತ್ತು ಪ್ರಾಣಿಬಿಟ್ಟ ವಕೀಲ

1 Min Read
Water Crisis

ಜೈಪುರ: ನೀರು ಮನುಷ್ಯನ ದೇಹಕ್ಕೆ ಅತಿಮುಖ್ಯವಾಗಿದ್ದು, ಒಬ್ಬ ವ್ಯಕ್ತಿಯು ಆಹಾರವಿಲ್ಲದೇ ಬದುಕುತ್ತಾನೆ. ಆದರೆ, ನೀರಿಲ್ಲದೆ ಆತ ಬದುಕಲಾರ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ದೇಶದ ಹಲವೆಡೆ ತಾಪಮಾನ ಹೆಚ್ಚಳವಾಗುತ್ತಿದ್ದು, ಹಲವರು ರಾಜ್ಯಗಳಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳು ಬಿಸಿಲಿನಿಂದ ಬಳಲುತ್ತಿದ್ದು, ಕುಡಿಯುವ ನೀರಿಗ ಹಾಹಾಕಾರ ಶುರುವಾಗಿದೆ. ಇದೀಗ ನೀರಿನ ವಿಚಾರಕ್ಕೆ ಬೇಸತ್ತು ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.

ಮೃತರನ್ನು ಮೋಹನ್​ ಲಾಲ್​ ಸೈನಿ (78) ಎಂದು ಗುರುತಿಸಲಾಗಿದ್ದು, ಇವರು ವಕೀಲರಾಗಿ ಕೆಲಸ ಮಾಡುತ್ತುದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Lawyer Suicide

ಇದನ್ನೂ ಓದಿ: ಒಂದೇ ಕುಟುಂಬದ ಕೈಯಲ್ಲಿ ಬಿಜೆಪಿ ಇರಬಾರದು: ಚುನಾವಣೆ ಸೋಲಿನ ಬಳಿಕ ಕೆ.ಎಸ್. ಈಶ್ವರಪ್ಪ ಹೇಳಿಕೆ

ಈ ಕುರಿತು ಪ್ರತಿಕ್ರಿಯಿಸಿರುವ ಅಲ್ವಾರ್​ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ವೃತ್ತಿಯಲ್ಲಿ ವಕೀಲರಾಗಿರುವ ಮೋಹನ್​ ಲಾಲ್​ ಸೈನಿ ಅವರು ತಮ್ಮ ಕುಟುಂಬದೊಂದಿಗೆ ಅಲ್ವಾರ್​ ನಗರದಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಅವರ ಮನೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಹಲವು ಬಾರಿ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿರಲಿಲ್ಲ.

ಪ್ರತಿನಿತ್ಯ ದೂರದ ಪ್ರದೇಶಗಳಿಂದ ಮನೆಗೆ ಮೋಹನ್​ ಅವರು ನೀರು ತರುತ್ತಿದ್ದರು. ನೀರಿನ ವಿಚಾರವಾಗಿ ಪ್ರತಿನಿತ್ಯ ಜಲಮಂಡಳಿಗೆ ದೂರು ನೀಡಿದರು ವಕೀಲನಾಗಿ ಸಮಸ್ಯೆಯನ್ನು ಪರಹರಿಸಲು ಸಾಧ್ಯವಾಗದಿದ್ದಾಗ ಮನನೊಂದು ಆತ್ಮಹತ್ಯೆಗೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ನಮಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಲ್ವಾರ್​ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

See also  ಮಂಡ್ಯ ಕಾಂಗ್ರೆಸ್​​ ಅಭ್ಯರ್ಥಿ ಸ್ಟಾರ್​ ಚಂದ್ರು ಆಸ್ತಿ ಎಷ್ಟಿದೆ ಗೊತ್ತಾ?
Share This Article