More

  ಒಂದೇ ಕುಟುಂಬದ ಕೈಯಲ್ಲಿ ಬಿಜೆಪಿ ಇರಬಾರದು: ಚುನಾವಣೆ ಸೋಲಿನ ಬಳಿಕ ಕೆ.ಎಸ್. ಈಶ್ವರಪ್ಪ ಹೇಳಿಕೆ

  ಶಿವಮೊಗ್ಗ: ತ್ರಿಕೋನ ಸ್ಫರ್ಧೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 2 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸಿದ್ದು, ಕಾಂಗ್ರೆಸ್​ನ ಗೀತಾ ಶಿವರಾಜ್​ಕುಮಾರ್​ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಭಾರೀ ಮುಖಭಂಗವಾಗಿದೆ. ಇನ್ನೂ ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್​ ಕೈತಪ್ಪಿದ್ದಕ್ಕೆ ಸ್ವಪಕ್ಷೀಯರ ವಿರುದ್ಧ ಸಿಡಿದೆದ್ದು, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಈಶ್ವರಪ್ಪ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

  ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಕೆ.ಎಸ್. ಈಶ್ವರಪ್ಪ, ಪಕ್ಷದ ಶುದ್ಧೀಕರಣ, ಅಪ್ಪ ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿಯನ್ನು ಬಿಡಿಸುವುದು ತಮ್ಮ ಗುರಿ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

  ಲೋಕಸಭೆ ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡಿದ ಹಾಗೂ ಮತ ಚಲಾಯಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಚುನಾವಣೆಗೆ ಸ್ಫರ್ಧೆ ಮಾಡಿದಂತ ಉದ್ಧೇಶ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಬಿಜೆಪಿಯ ನ್ಯೂನತೆಗಳನ್ನು ಸರಿಪಡಿಸುವ ಉದ್ಧೇಶದೊಂದಿಗೆ ನಾನು ಚುನಾವಣೆಯಲ್ಲಿ ಸ್ಫರ್ಧಿಸಿದೆ. ಅಪ್ಪ-ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿಯನ್ನು ಬಿಡಿಸುವ ಸಲುವಾಗಿ ನಾನು ಚುನಾವಣೆಯಲ್ಲಿ ಸ್ಫರ್ಧಿಸಿದೆ.

  ರಾಜ್ಯದಲ್ಲಿ ಬಿಜೆಪಿಯು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿಲ್ಲ. ಅದೇ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಈ ಹಿಂದೆ ಅನಂತಕುಮಾರ್, ಬಿ.ಎಸ್.ಯಡಿಯೂರಪ್ಪ, ರಾಮಚಂದ್ರಗೌಡ, ವಿ.ಎಸ್.ಆಚಾರ್ಯ ಮತ್ತು ನನ್ನನ್ನೂ ಒಳಗೊಂಡಂತೆ ಹಿರಿಯ ನಾಯಕರು ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವು. ಆದರೆ ಇಂದು ಆ ಪರಿಸ್ಥಿತಿ ಪಕ್ಷದಲ್ಲಿಲ್ಲ. ಎಲ್ಲವನ್ನೂ ತಂದೆ-ಮಕ್ಕಳು(ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ) ಮಾತ್ರ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  BSY Family

  ಇದನ್ನೂ ಓದಿ: ಕೊಯಂಬತ್ತೂರಿನಲ್ಲಿ ಅಣ್ಣಾಮಲೈ ಸೋಲು; ಮಟನ್​ ಬಿರಿಯಾನಿ ಹಂಚಿ ಸಂಭ್ರಮಿಸಿದ ಡಿಎಂಕೆ ನಾಯಕರು

  See also  ಹೋಳಿಹಬ್ಬ 2024; ರೈನ್‌-ಪೂಲ್‌ ಡ್ಯಾನ್ಸ್‌ಗೆ ನೀರು ಬಳಸದಿರಿ: ಜಲಮಂಡಳಿ

  ಕಳೆದ ಬಾರಿ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದೇವು. ಈ ಬಾರಿ 17 ಸ್ಥಾನ ಗೆಲ್ಲುವ ದುಸ್ಥಿತಿ ಬಂದಿದೆ. ಜೆಡಿಎಸ್ ಮೈತ್ರಿ ಇಲ್ಲದೇ ಇದ್ದಿದ್ದರೆ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಳ್ಳಬೇಕಿತ್ತು. ಇದಕ್ಕೆ ಅಪ್ಪಮಕ್ಕಳೇ ನೇರ ಕಾರಣ. ಇದನ್ನು ರಾಜ್ಯ ಮತ್ತು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಇಡೀ ದೇಶಕ್ಕೆ ಬಿಜೆಪಿಯೊಂದೇ ಆಶಾಕಿರಣ ಆಗಬೇಕಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ದೇಶದ ಜನರು ಎನ್‌ಡಿಎಯನ್ನು ಬೆಂಬಲಿಸಿದ್ದಾರೆ. ಕರ್ನಾಟಕದಲ್ಲಿ ಅಪ್ಪಮಕ್ಕಳ ಏಕಪಕ್ಷೀಯ ನಿರ್ಧಾರಗಳಿಂದ ಬಿಜೆಪಿಗೆ ಪೂರ್ಣ ಬಹುಮತ ಬರಲು ಆಗಿಲ್ಲ. 25 ಸೀಟು ಪಡೆದಿದ್ದರೆ ಕೇಂದ್ರದಲ್ಲಿ ಬೇರೆ(ಮಿತ್ರಪಕ್ಷಗಳ)ಯವರ ಬಳಿ ಬೇಡುವ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ವೈಯಕ್ತಿಕವಾಗಿ ನನಗೆ ಯಾವುದೇ ದ್ವೇಷವಿಲ್ಲ. ಆದರೆ ನನ್ನ ಪಕ್ಷ(ಬಿಜೆಪಿ) ಹಾಳಾಗಿ ಹೋಗುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪಕ್ಷದ ಶುದ್ಧೀಕರಣಕ್ಕಾಗಿ ಲೋಸಕಭೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

  ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಜವಾಬ್ದಾರಿ ಇದೆ. ಬಿ.ವೈ.ರಾಘವೇಂದ್ರ ಅವರನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡಿ, ಇನ್ನೊಬ್ಬ ಮಗ ಬಿ.ವೈ.ವಿಜಯೇಂದ್ರನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ. ನನ್ನ ಅಭ್ಯಂತರವಿಲ್ಲ ಎಂದು ವ್ಯಂಗ್ಯವಾಡಿದ ಅವರು, ಪಕ್ಷದ ನೀತಿ ನಿಯಮಗಳನ್ನು ಮೀರಿ ನಿಮ್ಮ ಒಂದೇ ಕುಟುಂಬ ಮುಂದೆ ಬಂದರೆ ಸಾಕಾ. ಹಿಂದುಳಿದ ಸಮಾಜವನ್ನು ಬೆಳೆಸುವ ಕೆಲಸ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

  ರಾಜ್ಯದ ಎಲ್ಲ ಕಾರ್ಯಕರ್ತರ ಧ್ವನಿಯನ್ನು ಪಕ್ಷ ಮತ್ತು ನಾಯಕರ ಮುಂದಿಡುತ್ತಿದ್ದೇನೆ. ನಾನು ಲೋಕಸಭೆಗೆ ಸ್ಪರ್ಧೆ ಮಾಡಿದ ಉದ್ದೇಶ ರಾಜ್ಯದಲ್ಲಿ ಪೂರ್ಣ ಚರ್ಚೆ ಆಗುತ್ತಿದೆ. ಬಿಜೆಪಿ ಅನೇಕ ನ್ಯೂನತೆ ಇರುವ ಸಂದರ್ಭದಲ್ಲಿ ಸರಿ ಹೋಗಬೇಕಿದೆ. ಅದರಲ್ಲಿ ಪಕ್ಷ ಶುದ್ಧೀಕರಣ ಆಗಬೇಕು. ಒಂದೇ ಕುಟುಂಬದ ಕೈಯಲ್ಲಿ ಬಿಜೆಪಿ ಇರಬಾರದು ಮತ್ತು ಹಿಂದುತ್ವವಾದಿಗಳ ಶಕ್ತಿ ಕುಗ್ಗಿಸುವ ಕೆಲಸ ಆಗಬಾರದು ಎಂಬುದು ನನ್ನ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

  See also  VIDEO| ಸಂಸದರು ಗರ್ಭಗುಡಿಯಲ್ಲಿನ ದೇವರ ಮೂರ್ತಿಗಳಿದ್ದಂತೆ ಯಾವುದೇ ಶಕ್ತಿಯಿಲ್ಲ: ರಾಹುಲ್​ ಗಾಂಧಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts