

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ಅಂಗಳದಲ್ಲಿ ತೆರೆಕಂಡ 'ಅನಿಮಲ್' ಚಿತ್ರ ದೇಶವ್ಯಾಪಿ ಭಾರೀ ಸದ್ದು ಮಾಡಿತು. ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ಈ ಸಿನಿಮಾ, ಕೆಲವು ಹಸಿಬಿಸಿ ದೃಶ್ಯಗಳಿಗೆ ವ್ಯಾಪಕ ಟೀಕೆಗಳನ್ನು ಎದುರಿಸಿತು. ಇದೆಲ್ಲದರ ಮಧ್ಯೆಯೂ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಸದ್ಯ ಅನಿಮಲ್ನಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ಮಿಂಚಿದ ನಟಿ ತೃಪ್ತಿ ದಿಮ್ರಿ ಇತ್ತೀಚಿನ ಸಂದರ್ಶನವೊಂದರಲ್ಲಿ ಯಾವ ನಟನೊಂದಿಗೆ ಅಭಿನಯಿಸಲು ಇಚ್ಚಿಯಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸದ್ಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿರುವ 'ಅನಿಮಲ್' ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ತೃಪ್ತಿ, ಸಿಕ್ಕಾಪಟ್ಟೆ ಬೋಲ್ಡ್ ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿಯ ಅಭಿನಯವನ್ನು ಕೊಂಡಾಡುತ್ತಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಸಿನಿಮಾ ಕುರಿತಂತೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳಿಗೆ ಹಾಜರಾಗುತ್ತಿದ್ದಾರೆ.
ಅದೇ ರೀತಿ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟಿಗೆ, ಮುಂದಿನ ಸಿನಿಮಾ ಯಾವ ತೆಲುಗು ಹೀರೋ ಜತೆಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ತೃಪ್ತಿ, "ನಾನು ಜೂನಿಯರ್ ಎನ್ಟಿಆರ್ ಅವರೊಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಅವಕಾಶ ಸಿಕ್ಕರೆ ತಕ್ಷಣ ಒಪ್ಪಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟಿ ಶ್ರುತಿ ಹರಿಹರನ್ ವರ್ಕ್ಔಟ್ ವಿಡಿಯೋ ವೈರಲ್!
ಸದ್ಯ ನಟಿಯ ಈ ಹೇಳಿಕೆಗೆ ಜೂ. ಎನ್ಟಿಆರ್ ಫ್ಯಾನ್ಸ್ ಸಂತಸಪಟ್ಟಿದ್ದು, ಶೀಘ್ರವೇ ತಮ್ಮ ನೆಚ್ಚಿನ ನಟನೊಂದಿಗೆ ತೆರೆ ಹಂಚಿಕೊಳ್ಳುವಂತೆ ಆಗಲಿ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).