More

    ಅನಿಮಲ್​ ಚಿತ್ರದಲ್ಲಿನ ಬೋಲ್ಡ್ ದೃಶ್ಯ ನೋಡಿ ಪಾಲಕರ ರಿಯಾಕ್ಷನ್ ಹೇಗಿತ್ತು; ತೃಪ್ತಿ ದಿಮ್ರಿ ಕೊಟ್ಟ ಉತ್ತರ ಹೀಗಿದೆ

    ಮುಂಬೈ: ಕಳೆದ ವರ್ಷದ ಅಂತ್ಯದಲ್ಲಿ ​ ನಟ ರಣಬೀರ್​ ಕಪೂರ್​, ಸಂದೀಪ್​ ರೆಡ್ಡಿ ವಂಗಾ ಕಂಬಿನೇಷನ್​ನ ಅನಿಮಲ್​ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರವು ಬ್ಲಾಕ್​ಬಸ್ಟರ್​ ಎನ್ನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

    ಡಿಸೆಂಬರ್​ 01ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ದೊರೆತ್ತಿದ್ದು, ಹಲವೆಡೆ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಇತ್ತ ಅನಿಮಲ್​ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದರೆ ಕೆಲವರು ಇದನ್ನು ಡಿಸಾಸ್ಟರ್​ ಎಂದು ತೆಗಳಿದ್ದರು.ಇನ್ನು ಅನಿಮಲ್​ನಂತಹ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​ ಎಂದು ಬಾಲಿವುಡ್​ನ ಹಿರಿಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದರು.

    ಅನಿಮಲ್​ ಚಿತ್ರ ನಟಿ ತೃಪ್ತಿ ದಿಮ್ರಿ ವೃತ್ತಿ ಜೀವನಕ್ಕೆ ಮೇಜರ್​ ಟ್ವಿಸ್ಟ್​ ಕೊಟ್ಟ ಸಿನಿಮಾ ಎಂದೇ ಹೇಳಬಹುದಾಗಿದೆ. ಈ ಚಿತ್ರದಲ್ಲಿ ಕೆಲವೇ ಹೊತ್ತು ಅವರು ಕಾಣಿಸಿಕೊಂಡರೂ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಸಾಮಾಜಿಕ ಜಾಲತಾಣದಲ್ಲಿ ಅವರ ಹಿಂಬಾಲಕರ ಸಂಖ್ಯೆಯಲ್ಲೂ ಖುಡ ಏರಿಕೆ ಕಂಡಿತ್ತು. ಬೋಲ್ಡ್ ದೃಶ್ಯಗಳಲ್ಲಿ ನಟನೆಯ ಕಾರಣಕ್ಕೆ ಟ್ರೋಲ್​ ಆಗಿದ್ದ ನಟಿ ಈ ಬಗ್ಗೆ ಮೌನ ಮುರಿದಿದ್ದು, ಇದರಿಂದ ತಮಗೆ ಯಾವುದೇ ತೊಂದರೆ ಆಗಿಲ್ಲ ಎಂದಿದ್ದಾರೆ.

    Tripti Dimri

    ಇದನ್ನೂ ಓದಿ: ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ; ಮಹಿಳಾ ಆಯೋಗದಿಂದ ನಟ ದರ್ಶನ್​ಗೆ ನೋಟಿಸ್​

    ಖಾಸಗಿ ಸುದ್ದಿ ವಾಹಿನಿ ಒಂದರ ಸಂದರ್ಶನಲ್ಲಿ ಮಾತನಾಡಿದ ನಟಿ ತೃಪ್ತಿ ದಿಮ್ರಿ, ಈ ಪಾತ್ರ ಕೆಲೌಏ ಹೊತ್ತು ಪರದೆ ಮೇಲೆ ಕಾಣಿಸಿಕೊಂಡರು ಇದು ನನಗೆ ತುಂಬಾ ಆಸಕ್ತಿದಾಯಕ ಎನ್ನಿಸಿತ್ತು. ಈ ಕಾರಣಕ್ಕೆ ಣಾನು ಆ ಪಾತ್ರವನ್ನು ಒಪ್ಪಿಕೊಂಡೆ. ನಾನು ಈ ಚಿತ್ರವನ್ನು ಏಕೆ ಮಾಡುತ್ತಿದ್ದೇನೆ ಎಂಬುದಕ್ಕೆ ನನಗೆ ಕಾರಣಗಳು ಗೊತ್ತಿವೆ. ಸಂದೀಪ್ ರೆಡ್ಡಿ ವಂಗ ಅವರು ಸಣ್ಣ ಪಾತ್ರ ಎಂದು ಮೊದಲೇ ಮಾಹಿತಿ ನೀಡಿದ್ದರು.

    ನನಗೆ ಪಾತ್ರ ಆಸಕ್ತಿಕರವಾಗಿದೆ ಎನಿಸಿತು. ಪ್ರೇಕ್ಷಕರು ಏನು ಹೇಳಬಹುದು ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಕಲಾವಿದಳಾಗಿ ನಾನು ಏನನ್ನು ಮಾಡಲು ಬಯಸಿದ್ದೆನೋ ಅದನ್ನು ಮಾಡಲು ಸಾಧ್ಯವಿಲ್ಲ. ನನ್ನ ಕಂಫರ್ಟ್​ಜೋನ್​ನ ಮೀರಿದ ಪಾತ್ರಗಳನ್ನು ಮಾಡಲು ನನಗೆ ಇಷ್ಟ. ಪಾತ್ರಗಳನ್ನು ಮಾಡುವಾಗ ಹಲವು ಸಲಹೆಗಳು ಬರುತ್ತವೆ. ನಾನು ಎಲ್ಲವನ್ನೂ ಕೇಳುತ್ತೇನೆ. ನನಗೆ ಸರಿ ಅನಿಸಿದ್ದನ್ನು ಮಾಡುತ್ತೇನೆ. ನಾನು ತಪ್ಪು ಮಾಡಬಹುದು. ಅದಕ್ಕೆ ಅವಕಾಶ ಇದೆ ಎಂದು ಹೇಳಿದ್ದಾರೆ.

    ಅನಿಮಲ್​ ಸಿನಿಮಾದಲ್ಲಿ ನನ್ನ ಬೋಲ್ಡ್ ದೃಶ್ಯ ಬಂದಾಗ ಪಾಲಕರು ಆಘಾತಕ್ಕೆ ಒಳಗಾಗಿದ್ದರು ಮತ್ತು ಬಡಬಡಿಸಿದರು. ಸಿನಿಮಾದಲ್ಲಿ ಆ ದೃಶ್ಯ ಏಕೆ ಮುಖ್ಯ ಎಂಬುದಕ್ಕೆ ದೊಡ್ಡ ಚರ್ಚೆಯೇ ಆಯಿತು. ಆದರೆ, ನನ್ನ ಬಗ್ಗೆ ಪಾಲಕರಿಗೆ ಹೆಮ್ಮೆ ಇದೆ ಅನ್ನೋದು ನನಗೆ ಗೊತ್ತು ಎಂದು ನಟಿ ತೃಪ್ತಿ ದಿಮ್ರಿ ಖಾಸಗಿ ಸುದ್ದಿ ವಾಹಿನಿ ಒಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts