More

    ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ; ಜಾತಿಗಣತಿ ವಿರುದ್ಧ ಮತ್ತೊಮ್ಮೆ ಗುಡುಗಿದ ಶಾಮನೂರು ಶಿವಶಂಕರಪ್ಪ

    ಬೆಂಗಳೂರು: ಯಾರು ಏನೇ ಹೇಳಲಿ.., ವಾಸ್ತವ ಅಂಶಗಳಿಂದ ದೂರವಿರುವ ಜಾತಿ ಗಣತಿ ವರದಿ ಒಪ್ಪಲು ಸಾಧ್ಯವೇ ಇಲ್ಲ ಎಂದು ಹಿರಿಯ ಕಾಂಗ್ರೆಸಿಗ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಪುನರುಚ್ಛರಿಸಿದ್ದಾರೆ.

    ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಶಿವಶಂಕರಪ್ಪ, ಸರ್ಕಾರ ಸ್ವೀಕರಿಸಿರುವ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು, ಆಯೋಗದ ಅಧ್ಯಕ್ಷರು ನಮ್ಮ ವರದಿ ವೈಜ್ಞಾನಿಕವಾಗಿ ಇದೆ ಎನ್ನುತ್ತಾರೆ. ಆದರೆ, ಅದು ಹೇಗೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸಾಬೀತು ಮಾಡುತ್ತೇವೆ ಎಂದು ಹೇಳಿದ್ದಾರೆ.

    ಸರ್ಕಾರ ಸ್ವೀಕರಿಸುವ ವರದಿ ಅವೈಜ್ಞಾನಿಕ ಎಂಬುದನ್ನು ನಾವು ಸಾಬೀತುಪಡಿಸುತ್ತೇವೆ. ಜಾತಿಗಣತಿಯನ್ನು ಸರ್ಕಾರ ಸ್ವೀಕರಿಸಿದ್ದು ತಪ್ಪು ಅಲ್ಲ. ಆದರೆ ಅದು ವೈಜ್ಞಾನಿಕವಾಗಿರಬೇಕು. ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಉಪಪಂಗಡಗಳು ಇವೆ. ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಿರುವ ಮಾಹಿತಿ ಇದೆ ಎಂದು ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ; ಜಾತಿಗಣತಿ ವಿರುದ್ಧ ಮತ್ತೊಮ್ಮೆ ಗುಡುಗಿದ ಶಾಮನೂರು ಶಿವಶಂಕರಪ್ಪ

    ಇದನ್ನೂ ಓದಿ: ಟಿಎಂಸಿ ಸರ್ಕಾರ ಉರುಳಿಸೋವರೆಗೂ ತಲೆಗೂದಲು ಬೆಳೆಸಲ್ಲ; ಶಪಥ ಮಾಡಿ ಬಿಜೆಪಿ ಸೇರ್ಪಡೆಯಾದ ಕೈ ನಾಯಕ

    9 ವರ್ಷದ ಹಿಂದಿನ ವರದಿ ತಯಾರಿಸಿದ್ದು ಕಾಂತರಾಜು, ಕೊಟ್ಟಿದ್ದು ಜಯಪ್ರಕಾಶ್ ಹೆಗ್ಡೆ. 9 ವರ್ಷದ ಹಿಂದಿನ ವರದಿ ಇದನ್ನ ಮೂಲೆಗೆ ಹಾಕಬೇಕು. ನಾವು ಎರಡು ಕೋಟಿ ಇದ್ದೇವೆ. ಜಾತಿಗಳ ನಡುವೆ ಸಂಘರ್ಷ ಆಗುತ್ತೆ. ಹೌದು, ಅವರು ಛೂ ಬಿಡ್ತಾರೆ. ಪುನರ್ ಪರಿಶೀಲನೆಗೆ ಒತ್ತಾಯ ಮಾಡ್ತೀವಿ. ಈಗಲೂ ಅದನ್ನೇ ಹೇಳ್ತೀನಿ ಮನೆಯಲ್ಲೆ ಕುಳಿತು ವರದಿ ಬರೆದಿದ್ದಾರೆ. ಸರ್ಕಾರ ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

    ಸ್ವೀಕಾರ ಮಾಡಿದ್ದು ತಪ್ಪಲ್ಲ. ಅಂಗೀಕಾರ ಮಾಡಬೇಡಿ ಅಂತ ನಾವು ಹೇಳಿದ್ದೇವೆ. ಒಕ್ಕಲಿಗರ ಸಂಘದವರು ಪ್ರತಿಭಟನೆ ಮಾಡಿದ್ದಾರೆ. ವೈಜ್ಞಾನಿಕವಾಗಿ ಮತ್ತೆ ಸರ್ವೆ ಮಾಡಬೇಕು ಎಂಬುದು ನಮ್ಮ ಸಮುದಾಯದ ಆಗ್ರಹ. ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ ವರದಿ ಕೊಟ್ಟಿದನ್ನ ಸರ್ಕಾರ ತೆಗೆದುಕೊಂಡಿದ್ದಾರೆ ಮುಂದೆ ನೋಡೋಣ ಎಂದು ಹೇಳಿದ್ದಾರೆ.

    ಉದ್ದೇಶಪೂರ್ವಕವಾಗಿ ವೀರಶೈವರನ್ನು ಕಡಿಮೆ ತೋರಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದ್ರೆ ಹಾಗೆ ಅನಿಸುತ್ತಿದೆ. ಅವಶ್ಯಕತೆ ಬಂದರೆ ವೀರಶೈವ ಮಹಾಸಭಾದಿಂದ ಖಾಸಗಿ ಜನಗಣತಿ ಮಾಡಿಸುತ್ತೇವೆ. ಈ ವರದಿಯಿಂದ ಜಾತಿಗಳ ನಡುವೆ ಸಂಘರ್ಷ ಆಗುತ್ತೆ. ಬೇಕು ಎಂದೇ ಛೂ ಬಿಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್​ ನಾಯಕ ಶಾಮನೂರು ಶಂಕರಪ್ಪ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts