ಎರಡು ಚಿತ್ರಗಳ ಹಿಟ್​ ಬೆನ್ನಲ್ಲೇ ದುಬಾರಿ ಸಂಭಾವನೆಗೆ ಬೇಡಿಕೆ! 6 ಕೋಟಿ ರೂ.ಗೆ 'ತೃಪ್ತಿ' ಇಲ್ಲ

ವಿಜಯವಾಣಿ - 2024-09-17T152058.174
Published on

ಮುಂಬೈ: ಸದ್ಯ ಬಾಲಿವುಡ್​ ಅಂಗಳದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ಸಖತ್ ಸದ್ದು ಮಾಡುತ್ತಿರುವ ಹಾಟ್​ ಬೆಡಗಿ, ನಟಿ ತೃಪ್ತಿ ದಿಮ್ರಿ, ಇದೀಗ ತಮ್ಮ ಲುಕ್​, ಬೋಲ್ಡ್​ ಅಭಿನಯದಿಂದಲೇ ಜನಪ್ರಿಯ ನಟಿಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ರಣಬೀರ್​ ಕಪೂರ್​ ನಟನೆಯ ಅನಿಮಲ್ ಚಿತ್ರದಲ್ಲಿ ಮಿಂಚಿದ ನಟಿ, ತದನಂತರ ಇತ್ತೀಚೆಗಷ್ಟೇ ತೆರೆಕಂಡ ಬ್ಯಾಡ್​ ನ್ಯೂಸ್​ ಸಿನಿಮಾ ಮುಖೇನ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಸದ್ಯ ಹಲವು ಆಫರ್​​ಗಳನ್ನು ಸ್ವೀಕರಿಸುತ್ತಿರುವ ತೃಪ್ತಿ ತಮ್ಮ ಸಂಭಾವನೆಯನ್ನು ದಿಢೀರ್ ಹೆಚ್ಚಿಸಿಕೊಂಡಿದ್ದಾರೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಇತ್ತೀಚಿನ ವರದಿ ಪ್ರಕಾರ, ಬಾಲಿವುಡ್​ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಕಂಡ ಅನಿಮಲ್​ ಚಿತ್ರ ಅತ್ಯುತ್ತಮ ಯಶಸ್ಸಿಗೆ ಪಾತ್ರವಾಯಿತು. ಈ ಚಿತ್ರದಲ್ಲಿ ಅಭಿನಯಿಸಿದ ತೃಪ್ತಿ, ಉತ್ತಮ ಸಂಭಾವನೆ ಕೂಡ ಪಡೆದುಕೊಂಡರು. ಸದ್ಯ ಸಿನಿ ಉದ್ಯಮದಲ್ಲಿ ಒಳ್ಳೆಯ ಬೆಳವಣಿಗೆ ನೋಡುತ್ತಿದ್ದಂತೆ ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿರುವ ತೃಪ್ತಿ ದಿಮ್ರಿ, ಪೇಮೆಂಟ್​ ವಿಷಯದಲ್ಲಿ ದೊಡ್ಡ ಬೇಡಿಕೆಯನ್ನೇ ನಿರ್ಮಾಪಕರ ಮುಂದಿಟ್ಟಿದ್ದಾರೆ.

ಈ ಹಿಂದಿನ ಚಿತ್ರಕ್ಕೆ 6 ಕೋಟಿ ರೂ. ಸಂಭಾವನೆ ಪಡೆದಿದ್ದ ತೃಪ್ತಿ, ಇದೀಗ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಪೇಮೆಂಟ್​ನಲ್ಲಿ ಏಕಾಏಕಿ 4 ಕೋಟಿ ರೂಪಾಯಿ ಹೆಚ್ಚಿಸಿಕೊಂಡಿರುವ ತೃಪ್ತಿ ಇದೀಗ ದುಬಾರಿ ನಟಿಯಾಗಿ ಹೊರಹೊಮ್ಮಿದ್ದಾರೆ ಎಂದರೆ ತಪ್ಪಾಗಲಾರದು. ಸದ್ಯ ಟ್ರೆಂಡಿಂಗ್​ನಲ್ಲಿರುವ ನಟಿಯರಲ್ಲಿ ಮುಂಚೂಣಿಯಲ್ಲಿರುವ ಈ ಹಾಟ್​ ಬೆಡಗಿ, ಯಾವ ಸ್ಟಾರ್​ ನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net