ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ಚೈತನ್ಯ ಯುವ ವೃಂದದ 40ರ ಸಂಭ್ರಮ ಪ್ರಯುಕ್ತ ತಾಣ ಗೆಂಡೋತ್ಸವದಲ್ಲಿ ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ನಿವೃತ್ತ ಆರೋಗ್ಯ ಸಹಾಯಕಿ ಗುಲಾಬಿ, ಕೃಷಿಕ ಆನಂದ ಹೆಗ್ಡೆ, ಕಾರ್ಮಿಕ ಚಂದು ಪೂಜಾರಿ, ಬಸ್ ಏಜೆಂಟ್ ಗಣಪತಿ ಮರಕಾಲ, ಮಾಜಿ ಯೋಧ ಶಂಭು ನಾಯ್ಕ, ನಿವೃತ್ತ ಪೊಲೀಸ್ ದಾಮೋದರ್, ಚಾಲಕ ಜಾರಪ್ಪ ಮಡಿವಾಳ, ಧಾರ್ಮಿಕ ಕ್ಷೇತ್ರದ ಕೃಷ್ಣ ಶೆಟ್ಟಿ ಕಿನ್ನಿಗುಡ್ಡೆ, ತುಳು ಭಾಷಣದಲ್ಲಿ ಸಾಧನೆ ಮಾಡಿದ ಸಮೀಕ್ಷಾ, ಚಿತ್ರಕಲೆ ಸಾಧಕ ವಿನೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಹೆಬ್ರಿ ಚೈತನ್ಯ ಯುವ ವೃಂದ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಅನಂತ ಪದ್ಮನಾಭ, ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನ ಆನುವಂಶಿಕ ಮೋಕ್ತೇಸರ ತಾರಾನಾಥ ಬಲ್ಲಾಳ್, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ಹೆಬ್ರಿ ಗ್ರಾಪಂ ಉಪಾಧ್ಯಕ್ಷೆ ಸುಪ್ರಿಯಾ, ಸೋನಿ ಪಿ.ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಉದಯ ಕುಮಾರ್, ಹೆಬ್ರಿ ಚೈತನ್ಯ ಯುವ ವೃಂದ ಗೌರವಾಧ್ಯಕ್ಷ ಎಚ್.ಜನಾರ್ದನ್, ಕಾರ್ಯದರ್ಶಿ ರಾಜೇಶ ಆಚಾರ್ಯ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ನಿರೂಪಿಸಿದರು.