ಕೋಟ: ಬ್ರಹ್ಮಾವರ ತಾಲೂಕು ಘಟಕದ ಸರ್ಕಾರಿ ಗ್ರೇಡ್ 1ದೈಹಿಕ ಶಿಕ್ಷಣ ಶಿಕ್ಷಕರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಮಣೂರು ಪಡುಕರೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ ) ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕರ್ಜೆ ಕಾಲೇಜಿನ ಶಶಿಕಾಂತ, ಕಾರ್ಯದರ್ಶಿಯಾಗಿ ನಾಲ್ಕೂರು ಕಾಲೇಜಿನ ಕೃಷ್ಣ ನಾಯಕ್.ಎನ್ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಹೈಕಾಡಿ ಕಾಲೇಜಿನ ಪ್ರವೀಣ್ ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಬ್ರಹ್ಮಾವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಜಯಲಕ್ಷ್ಮೀ ಪಿ.ಶೆಟ್ಟಿ , ಖಜಾಂಚಿಯಾಗಿ ಜಾನುವಾರುಕಟ್ಟೆ ಸರ್ಕಾರಿ ಪ್ರೌಢಶಾಲೆಯ ಅಕ್ಷತಾ ಆಯ್ಕೆಯಾಗಿದ್ದಾರೆ. ನಾಲ್ಕೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೃಷ್ಣ ನಾಯಕ್ ಕೆ. ಚುನಾವಣೆ ನಡೆಸಿಕೊಟ್ಟರು.