

ಹೆಬ್ರಿ: ಮೂರ್ಸೆ ಪ್ರಗತಿ ಬಂಧು ಸಂಘ ಕಳೆದ 25ವರ್ಷಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ನಿರಂತರವಾಗಿ ನಡೆಯಲಿ ಎಂದು ಉಡುಪಿ ಜಿಲ್ಲಾ ಯೋಜನ ನಿರ್ದೇಶಕ ನಾಗರಾಜ್ ಶೆಟ್ಟಿ ಹೇಳಿದರು.
ನಾಡ್ಪಾಲು ಸಮೀಪದ ಕಾಸನಮಕ್ಕಿ ಮೂರ್ಸೆ ಪ್ರಗತಿಬಂಧು ಸಂಘದ 25ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.
ನಾಡ್ಪಾಲು ಗ್ರಾಪಂ ಅಧ್ಯಕ್ಷ ನವೀನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಿದ್ದರು. ಹೆಬ್ರಿ ತಾಲೂಕು ಯೋಜನೆ ಅಧಿಕಾರಿ ಲೀಲಾವತಿ, ಪ್ರಮುಖರಾದ ದಿನೇಶ್ ಹೆಗ್ಡೆ, ಪ್ರವೀಣ್ ಹೆಗ್ಡೆ, ರಾಮಣ್ಣ ಪೂಜಾರಿ ಉಪಸ್ಥಿತರಿದ್ದರು. ಮೇಲ್ವಿಚಾರಕ ಉದಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.