ಮಲ್ಪೆ ಬಂದರಿನಲ್ಲಿ ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ

19udp mahile halle
Published on

ಉಡುಪಿ: ಮಲ್ಪೆ ಮೀನುಗಾರಿಕ ಬಂದರಿನಲ್ಲಿ ಮೀನು ಕಳವುಗೈದ ಆರೋಪದಲ್ಲಿ ವಿಜಯನಗರ ಜಿಲ್ಲೆ ಮೂಲದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಅವಾಚ್ಯಶಬ್ದಗಳಿಂದ ಬೈದು, ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಲಕ್ಷಿ$್ಮಬಾಯಿ, ಚಂದ್ರ, ಸುಂದರ್, ಶಿಲ್ಪಾ ಬಂಧಿತರು.

ವಿಜಯನಗರ ಜಿಲ್ಲೆಯ 36 ವರ್ಷದ ಮಹಿಳೆ ಸುಮಾರು 5 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿರುವ ಮೀನನ್ನು ಬುಟ್ಟಿಯಲ್ಲಿ ತುಂಬಿಸಿ ತರುವ ಕೆಲಸ ಮಾಡಿಕೊಂಡಿದ್ದು, ಮಾ.18 ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಲ್ಪೆ ಬಂದರಿನಲ್ಲಿ ಚಂದ್ರ ಎಂಬುವವರ ಬೋಟ್ನಿಂದ ಮೀನು ಖಾಲಿ ಮಾಡಿ ಒಂದು ಬುಟ್ಟಿ ಸಿಗಡಿ (ಚಟ್ಲಿ) ಮೀನನ್ನು ಪದಾರ್ಥಕ್ಕೆಂದು ಕೊಂಡು ಹೋಗಿದ್ದರು. ಇದರಿಂದ ಕೋಪಗೊಂಡ ಮೀನು ಮಾರಾಟಗಾರರಾದ ಲಕ್ಷ್ಮೀ, ಶಿಲ್ಪ, ಚಂದ್ರ, ಸುಂದರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.

ರಾಜಿ ಪ್ರಕರಣಕ್ಕೆ ಜೀವಬಂತು

ಹಲ್ಲೆ ಬಳಿಕ ಹಿರಿಯರ ಸಮಕ್ಷಮದಲ್ಲಿ ಮಾ.18ರಂದು ಮಹಿಳೆ ಹಾಗೂ ಆರೋಪಿತರು ಸೇರಿ ಮಾತುಕತೆ ನಡೆಸಿ ತಮ್ಮೊಳಗೆ ರಾಜಿ ಮಾಡಿಕೊಂಡಿದ್ದರು. ಮಾ.19 ರಂದು ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಮಲ್ಪೆ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ಪ್ರಕರಣ ದಾಖಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net