ವಾಯುಸೇನೆ ನಿವೃತ್ತ ಯೋಧ ದಿನಕರ ಶೆಣೈಗೆ ಸನ್ಮಾನ

gan (9)
Published on

ಕುಂದಾಪುರ: ದೇಶಕ್ಕಾಗಿ ಹೋರಾಡಿ ನಿವೃತ್ತಿ ಹೊಂದಿದ ಯೋಧರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬೈಂದೂರು ಮಂಡಲ ವ್ಯಾಪ್ತಿಯ ಎಲ್ಲ ಮಹಾಶಕ್ತಿ ಕೇಂದ್ರಗಳಲ್ಲಿ ನಿವೃತ್ತ ಯೋಧರನ್ನು ಗೌರವಿಸುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಬಿಜೆಪಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ ಹೇಳಿದರು.

ಬಿಜೆಪಿ ಬೈಂದೂರು ಮಂಡಲ ವತಿಯಿಂದ ಗಂಗೊಳ್ಳಿಯಲ್ಲಿ ಗುರವಾರ ನಡೆದ ನಿವೃತ್ತ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಯುಸೇನೆಯ ನಿವೃತ್ತ ಯೋಧ ಟಿ.ದಿನಕರ ಶೆಣೈ ಅವರನ್ನು ಬೈಂದೂರು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಂಡಲ ಉಪಾಧ್ಯಕ್ಷರಾದ ಮಿಥುನ್ ಎಂ.ಡಿ.ಬಿಜೂರು, ಮಾಲತಿ ನಾಯಕ್, ನಾಗರತ್ನಾ, ಖಜಾಂಚಿ ಗಣೇಶ ಗಾಣಿಗ, ತ್ರಾಸಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವೀಂದ್ರ ಖಾರ್ವಿ ಹೊಸಪೇಟೆ, ಯುವಮೋರ್ಚಾ ಪ್ರಮುಖ ಜಯಂತ ಶೇರುಗಾರ್, ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ಶಾಂತಿ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net