

ಕೋಟ: ಕೋಟೇಶ್ವರದ ಹೊಸಬಡಾಕೆರೆ ಸ.ಹಿ.ಪ್ರಾ.ಶಾಲೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಹಶಿಕ್ಷಕ ಅನಂತಯ್ಯ ನಾವಡ ಅವರಿಗೆ ಶುಕ್ರವಾರ ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳ ಸಂ ವತಿಯಿಂದ ಬೀಳ್ಕೊಡುಗೆ ಸವಾರಂಭ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಮೊಗವೀರ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಮುಖ್ಯಶಿಕ್ಷಕ ಹರಿಕೃಷ್ಣ ಹಂದೆ, ವಿದ್ಯಾಭಿವಾನಿಗಳಾದ ಪ್ರಕಾಶ್ ಬೆಟ್ಟಿನ್, ಶ್ರೀನಿವಾಸ ಗಾಣಿಗ, ಕೋಟೇಶ್ವರ ಪಂಚಾಯಿತಿ ಸದಸ್ಯ ರಾಜು ಮೊಗವೀರ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಆನಂದ್ ಕುಂದರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪದ್ಮಾವತಿ ಸ್ವಾಗತಿಸಿ, ಶಿಕ್ಷಕಿ ಮಂಗಳಾ ವಂದಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಶೈಲಾ ನಿರೂಪಿಸಿದರು.