ಗಂಗೊಳ್ಳಿಯಲ್ಲಿ ತಾಯಂದಿರ ದಿನಾಚರಣೆ ಕಾರ್ಯಕ್ರಮ

gan (7)
Published on

ಕುಂದಾಪುರ: ಕೆಥೊಲಿಕ್ ಸ್ತ್ರೀ ಸಂಟನೆ ಅಮೃತ ಮಹಾಸಂ ಗಂಗೊಳ್ಳಿ ಟಕ ವತಿಯಿಂದ ‘ತಾಯಂದಿರ ದಿನಾಚರಣೆ’ ಕಾರ್ಯಕ್ರಮ ಭಾನುವಾರ ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ಚರ್ಚಿನ ಸಭಾಂಗಣದಲ್ಲಿ ನಡೆಯಿತು.

ಗಂಗೊಳ್ಳಿ ಚರ್ಚಿನ ಧರ್ಮಗುರು ತೋಮಸ್ ರೋಶನ್ ಡಿಸೋಜ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ವೆರೋನಿಕಾ ಕರ್ನೆಲಿಯೋ ಅವರು ಕುಟುಂಬದಲ್ಲಿ ತಾಯಿಯ ಪ್ರಾಮುಖ್ಯತೆ ಬಗ್ಗೆ ವಾಹಿತಿ ನೀಡಿದರು.

24 ವರ್ಷಗಳಿಂದ ಗಂಗೊಳ್ಳಿ ಟಕದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.

ಅಶ್ವಿನ್ ರೆಬೆಲ್ಲೊ ಎಸ್‌ಜೆ, ಕಾರ್ಮೆಲ್ ಕೊವೆಂತಿನ ಮುಖ್ಯಸ್ಥೆ ಧರ್ಮಭಗಿನಿ ಗ್ರೇಸಿ ಲೋಬೊ, ಕೆಥೊಲಿಕ್ ಸ್ತ್ರೀ ಸಂಟನೆ ಭಾವನಾ, ಮಹಿಳಾ ಒಕ್ಕೂಟ ಕುಂದಾಪುರ ವಲಯ ಅಧ್ಯಕ್ಷೆ ಶರ್ಮಿಳಾ ಬರೆಟ್ಟೊ, ಸುಗಮ್ಯ ಮಹಿಳಾ ಒಕ್ಕೂಟದ ಮೊತಿಯಾ, ಪತ್ರದ ಸಂಚಾಲಕಿ ಪ್ರೀತಿ ಫೆನಾರ್ಂಡಿಸ್, ಕುಂದಾಪುರ ಬೈಂದೂರು ತಾಲೂಕಿನ ಪ್ರೇರಕಿ ಸಿಂತಿಯಾ ರೊಡ್ರಿಗಸ್, ಚರ್ಚಿನ ಪಾಲನಾ ಮಂಡಳಿ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ ಹಾಗೂ 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್ ಉಪಸ್ಥಿತರಿದ್ದರು.

ಅಧ್ಯಕ್ಷೆ ಅನಿತಾ ನಾರ್ಂಡಿಸ್ ಸ್ವಾಗತಿಸಿದರು. ಫ್ರೀಡಾ ಕ್ರಾಸ್ತಾ ಅತಿಥಿಗಳನ್ನು ಪರಿಚಯಿಸಿದರು. ಆಶಾ ಡಿಕೊಸ್ಟಾ ಸನ್ಮಾನಿತರನ್ನು ಪರಿಚಯಿಸಿದರು. ಸೆಲಿನ್ ಲೋಬೊ ವಂದಿಸಿದರು. ವಿವಾನ್ ರೆಬೇರೊ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net