

ಕುಂದಾಪುರ: ಏಳನೇ ವೇತನ ಆಯೋಗವು ಶಿಫಾರಸು ವಾಡಿರುವ ನಿವೃತ್ತ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳಾದ ನಗದು ರಹಿತ ವೈದ್ಯಕೀಯ ಸೌಲಭ್ಯ, 70ರಿಂದ 80 ವಯೋಮಿತಿಯವರ ಮೂಲ ಪಿಂಚಣಿ ಶೇ.10 ಹೆಚ್ಚಿಸುವುದು, ಪಿಂಚಣಿದಾರರು ಮೃತಪಟ್ಟ ಸಂದರ್ಭ ಅಂತಿಮ ಕ್ರಿಯಾ ಕರ್ಮಗಳ ವೆಚ್ಚಕ್ಕೆ 10 ಸಾವಿರ ರೂ. ಅವರ ನಾಮನಿರ್ದೇಶಿತರಿಗೆ ಮಂಜೂರು ವಾಡಬೇಕೆನ್ನುವ ಬೇಡಿಕೆ ಈಡೇರಿಸುವಂತೆ ಕುಂದಾಪುರ ತಾಲೂಕು ನಿವೃತ್ತ ನೌಕರರ ಸಂದ ವತಿಯಿಂದ ಮುಖ್ಯ ಮಂತ್ರಿಗೆ ಕುಂದಾಪುರ ತಾಲೂಕು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಸಂದ ಅಧ್ಯಕ್ಷ ವಸಂತ ಹೆಗ್ಡೆ ಮನವಿಯನ್ನು ಕುಂದಾಪುರ ತಾಲೂಕು ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ವಿನಯ್ ಕುವಾರ್ ಸಲ್ಲಿಸಿದರು. ಸಂದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.