ಮಾರಣಕಟ್ಟೆ ಮೇಳ ನಿವೃತ್ತರಿಗೆ ಗೌರವಾರ್ಪಣೆ

YAKSHAGANA
Published on

ಕೋಟ: ಮಾರಣಕಟ್ಟೆ ಮೇಳಗಳ ಕೊನೆಯ ದೇವರ ಸೇವೆ ಆಟದಂದು ನಿವೃತ್ತರಾದ ಮೇಳದ ಮ್ಯಾನೇಜರ್ ರಾಜೀವ್ ಶೆಟ್ಟಿ ವಂಡ್ಸೆ, ಕಲಾವಿದರಾದ ಬಿ.ಎಚ್.ಮೂರ್ತಿಗೌಡ ಗುಡ್ಡಿಕೆರೆ, ನಿವೃತ್ತ ಸಹಾಯಕ ಸಿಬ್ಬಂದಿ ಸಂಜೀವ ಗಾಣಿಗ ಅವರಿಗೆ ಕಲಾಕಾಣಿಕೆ ನೀಡಿ ಗೌರವಿಸಲಾಯಿತು.

ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್, ಮಾರಣಕಟ್ಟೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಿ.ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ, ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ದಿನಕರ ಶೆಟ್ಟಿ, ಅಶೋಕ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಗೋವರ್ಧನ ಶೆಟ್ಟಿ, ಆದರ್ಶ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಮಂಜಯ್ಯ ಶೆಟ್ಟಿ, ಕೆ.ಸಿ.ಸುರೇಂದ್ರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಸಿ.ರಘುರಾಮ್ ಶೆಟ್ಟಿ ಸ್ವಾಗತಿಸಿದರು. ಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net