

ಕೊಕ್ಕರ್ಣೆ: ಬ್ರಹ್ಮಾವರ ತಾಲೂಕು ಯಡ್ತಾಡಿಯ ಸತೀಶ ಕುಮಾರ ಶೆಟ್ಟಿ ಅವರ ಕೃಷಿ ಭೂಮಿಯಲ್ಲಿ ಮೂರು ವರ್ಷದಲ್ಲಿ ಫಲ ನೀಡುವ ಅಧಿಕ ಇಳುವರಿಯ ತೆಂಗಿನ ಸಸಿಗಳ ನಾಟಿ ಪ್ರಾತ್ಯಕ್ಷಿಕೆಯನ್ನು ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ ಹೇಮಂತ್ ಕುಮಾರ್ ಉದ್ಘಾಟಿಸಿದರು.
ಸಸಿ ನಾಟಿಗೆ ಹೊಂಡ ತಯಾರಿಸಿ, ಸೂಕ್ತ ಗೊಬ್ಬರ, ಮಣ್ಣು ಇತ್ಯಾದಿಗಳಿಂದ ಹೊಂಡ ತುಂಬಿಸಿ, ಗಿಡ ನಾಟಿ ಮಾಡುವ ವಿಧಾನವನ್ನು ಶಿಕ್ಷಕ, ಕೃಷಿ ಪರಿಣತರಾದ ಜೋಸೆಫ್ ತೋರಿಸಿಕೊಟ್ಟರು. ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೋಸೆಫ್ ಮಾರ್ಗದರ್ಶನದಲ್ಲಿ 75 ತೆಂಗಿನ ಸಸಿಗಳನ್ನು ನಾಟಿ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ಬಾರ್ಕೂರು ಸೀತಾರಾಮ ಶೆಟ್ಟಿ, ಜಂಬೂರು ಕೃಷ್ಣ ಅಡಿಗ, ನಾಗರಮಠ ರಾಮ ಮತ್ತಿತರರು ಉಪಸ್ಥಿತರಿದ್ದು, ಮಾಹಿತಿ ಪಡೆದರು. ವಿಮಲಾ ಎಸ್.ಶೆಟ್ಟಿ ವಂದಿಸಿದರು.