ಭಜನಾ ತರಬೇತುದಾರ ಕೃಷ್ಣ ಬಂಗೇರಗೆ ಸನ್ಮಾನ

bhajana
Published on

ಕೋಟ: ಪಾಂಡೇಶ್ವರ ಶ್ರೀ ಬ್ರಹ್ಮ ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಕುಣಿತ ಭಜನಾ ತರಬೇತುದಾರ ಕೃಷ್ಣ ಬಂಗೇರ ಅವರನ್ನು ಅಭಿನಂದಿಸಲಾಯಿತು. ಪಾಂಡೇಶ್ವರ ರಕ್ತೇಶ್ವರಿ ದೇಗುಲ ಧರ್ಮದರ್ಶಿ ಕೆ.ವಿ.ರಮೇಶ್, ಶ್ರೀ ಬ್ರಹ್ಮ ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನ ಪ್ರಮುಖರಾದ ಸುಬ್ರಮಣ್ಯ ಭಟ್, ಶ್ರೀ ಕ್ಷೇತ್ರ ಕಳಿಬೈಲ್ ಪ್ರಧಾನ ಅರ್ಚಕ ಅಭಿಜಿತ್, ಪ್ರಮುಖರಾದ ಶೇಖರ್ ಮೂಡುಕಟ್ಟು, ರವಿಶ್ ಶ್ರೀಯಾನ್, ಬಾಲಾಜಿ ಕಲಾ ಭಜನಾ ಮಂಡಳಿಯ ಪ್ರಮುಖರಾದ ವಿಜಯ ಆಚಾರ್ಯ ಪಾಂಡೇಶ್ವರ, ಮಹಿಳಾ ತಂಡದ ಅಧ್ಯಕ್ಷೆ ಮಮತಾ ಪಾಂಡೇಶ್ವರ, ಸದಸ್ಯೆ ಕಲ್ಯಾಣಿ ಉಪಸ್ಥಿತರಿದ್ದರು. ಶ್ರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net