ಶ್ರೀ ಮಹಾಲಿಂಗೇಶ್ವರ ಭಜನಾ ತಂಡದವರಿಗೆ ಗೌರವಾರ್ಪಣೆ

kota
Published on

ಕೋಟ: ಮಣೂರು ಶ್ರೀ ಹೇರಂಬ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಅಂಗವಾಗಿ ವಿವಿಧ ಪೂಜಾ ಕಾರ್ಯಗಳು ದೇಗುಲದ ಪ್ರಧಾನ ಅರ್ಚಕ ರವಿ ಐತಾಳ್ ನೇತೃತ್ವದಲ್ಲಿ ನಡೆಯಿತು.

ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ದಂಪತಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ಶ್ರೀ ಮಹಾಲಿಂಗೇಶ್ವರ ಭಜನಾ ತಂಡದ ಪರವಾಗಿ ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ, ಚಂದ್ರಿಕಾ ಭಟ್ ಅವರನ್ನು ಸನ್ಮಾನಿಸಲಾಯಿತು.

ದೇಗುಲ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಉರಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಆಚಾರ್, ಅಶೋಕ್ ಶೆಟ್ಟಿ, ಕೃಷ್ಣ ದೇವಾಡಿಗ, ಚಂದ್ರ ಹರ್ತಟ್ಟು, ದಿವ್ಯಾ ಪ್ರಭು, ಸುಫಲ ಶೆಟ್ಟಿ, ಅಚುತ್ ಹಂದೆ, ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ವಿಷ್ಣುಮೂರ್ತಿ ಮಯ್ಯ, ಅರುಣಾಚಲ ಮಯ್ಯ, ಶಿವರಾಮ ಶೆಟ್ಟಿ, ರವಿ ಮಯ್ಯ, ಜಯರಾಮ ಆಚಾರ್, ನಾಗರಾಜ್ ಅಮೀನ್, ಸಂತೋಷ್ ಸುವರ್ಣ, ನವೀನ್ ಶೆಟ್ಟಿ, ಚಂದ್ರ ಆಚಾರ್, ನಾಗಪಯ್ಯ ಪ್ರಭು, ಪುರುಷೋತ್ತಮ್ ಪೈ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net