

ಗಂಗೊಳ್ಳಿ: ಗಂಗೊಳ್ಳಿ ಸಾರ್ವಜನಿಕ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವ-2024 ಪ್ರಯುಕ್ತ ಬಾಬಣ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಸೋಮವಾರ ಸಮಿತಿಯ ಅಧ್ಯಕ್ಷ ಸತೀಶ್ ಜಿ. ಮತ್ತು ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ ಸನ್ಮಾನ ನೆರವೇರಿಸಿದರು. ಜಿ.ರಾಘವೇಂದ್ರ ಆಚಾರ್ಯ, ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮೀಕಾಂತ ಮಡಿವಾಳ, ಬಿ.ರಾಘವೇಂದ್ರ ಪೈ, ರಾಜಗೋಪಾಲ ಶೇರುಗಾರ್, ಅರುಣ್ ಕುಮಾರ್, ವರುಣ್ ವಿ.ಆಚಾರ್ಯ, ಮಹಿಳಾ ಮಂಡಳಿಯ ಪ್ರೇಮಾ ಸಿ.ಪೂಜಾರಿ, ಅನಿತಾ ಎನ್.ಶೇಟ್, ಸ್ವಾತಿ ಮಡಿವಾಳ ಉಪಸ್ಥಿತರಿದ್ದರು.