

ಕೋಟ: ಕೋಟತಟ್ಟುವಿನ ಹಂದಟ್ಟು ದಾನಗುಂದು ಶ್ರೀಮಲಸಾವರಿ ಪರಿವಾರ ದೈವಸ್ಥಾನದಲ್ಲಿ ಹಂದಟ್ಟು ಮಹಿಳಾ ಬಳಗದ ಆಶ್ರಯದಲ್ಲಿ ನವರಾತ್ರಿ ಉತ್ಸವ ಆಚರಿಸಲಾಯಿತು.
ಅರ್ಚಕ ಕೃಷ್ಣ ಪೂಜೆ ನೆರವೆರಿಸಿದರು. ಪಾತ್ರಿ ನರಸಿಂಹ ಸಹಕರಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ, ಸ್ಥಾಪಾಕಾಧ್ಯಕ್ಷೆ ಪುಷ್ಪಾ ಕೆ ಹಂದಟ್ಟು, ಕಾರ್ಯದರ್ಶಿ ಯಶೋದಾ, ಗೌರವಾಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪ್ರೇಮರಾಜು, ಕೋಶಾಧಿಕಾರಿ ಅಶ್ವಿನಿ ಸಂದೇಶ್, ಗೆಳೆಯ ಬಳಗದ ಅಧ್ಯಕ್ಷ ಪ್ರಕಾಶ್ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.