ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ

ranganakere
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉಜ್ರೆಬೈಲ್ ರಂಗನಕೇರಿ ಬಾರಕೂರಿನ ಕೂಡ್ಲಿ ಶ್ರೀ ಗದ್ದುಗೆ ಅಮ್ಮನವರ ದೇವಸ್ಥಾನ ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಿಸರದ ಪ್ರಸಿದ್ಧ ಕನ್ನಡ ವಾಹಿನಿ ಪ್ರತಿಭೆಗಳಾದ ಶ್ಲಾಘ ಸಾಲಿಗ್ರಾಮ, ಸಮೀಕ್ಷಾ ಸಾಲಿಗ್ರಾಮ, ದೀಕ್ಷಾ ಬ್ರಹ್ಮಾವರ ಅವರನ್ನು ಗೌರವಿಸಲಾಯಿತು.
Published on

ಬ್ರಹ್ಮಾವರ: ಕನ್ನಡ ಶಾಲೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದವರೇ ಇಂದು ಹಿಂದು ಹಬ್ಬ, ಊರಿನ ಆಚರಣೆ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವವರಲ್ಲಿ ಹೆಚ್ಚಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬಂಟ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉಜ್ರೆಬೈಲ್ ರಂಗನಕೇರಿ ಬಾರಕೂರಿನ ಕೂಡ್ಲಿ ಶ್ರೀ ಗದ್ದುಗೆ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರುಗಿದ ಶಾರದಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಗ್ರಾಮದಲ್ಲಿ ನಡೆಯುವ ದೇವತಾ ಪೂಜೆ ಆರಾಧನೆ ಮತ್ತು ಇಂತಹ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುವ ಕಾರ್ಯಕ್ಕೆ ಹಣವಂತರು ಸಹಕಾರ ನೀಡಬೇಕಾಗಿದೆ ಎಂದರು. ಪರಿಸರದ ಪ್ರಸಿದ್ಧ ಕನ್ನಡ ವಾಹಿನಿ ಪ್ರತಿಭೆಗಳಾದ ಶ್ಲಾಘ ಸಾಲಿಗ್ರಾಮ, ಸಮೀಕ್ಷಾ ಸಾಲಿಗ್ರಾಮ, ದೀಕ್ಷಾ ಬ್ರಹ್ಮಾವರ ಮತ್ತು ಸಾಮಾಜಿಕ ಕ್ಷೇತ್ರದ ಸಾಧಕರಾದ ಸುಭೇದಾರ್ ಜನಾರ್ದನ ಕೆ.ಜನನಿ ನಾಯ್ಕ, ಸುಮಂತ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಮರಾಟಿ ಕೂಡುಕಟ್ಟಿನ ಗುರಿಕಾರ ಅಖಿಲೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಮೇಶ ಭಟ್ಟ ನಾಯರ ಬೆಟ್ಟು, ಉದ್ಯಮಿಗಳಾದ ಗೋಪಿನಾಥ ಕಾಮತ್, ಬಾರಕೂರು ಶಾಂತಾರಾಮ ಶೆಟ್ಟಿ, ಶ್ರೀನಿವಾಸ ಶೆಟ್ಟಿಗಾರ್, ಗೋಪಾಲ್ ನಾಯ್ಕ, ಶ್ರೀನಿವಾಸ ಶೆಟ್ಟಿ ಹುಬ್ಬಳ್ಳಿ, ಕೆನರಾ ಬ್ಯಾಂಕ್ ಡಿಜಿಎಂ ರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸೌಮ್ಯಾ, ದಿವ್ಯಾ ಪ್ರಾರ್ಥಿಸಿ, ಸಮಿತಿ ಅಧ್ಯಕ್ಷ ಅರುಣ್ ನಾಯ್ಕ ಸ್ವಾಗತಿಸಿದರು. ಕೃಷ್ಣ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಅಕ್ಷಯ್ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net