‘ನಿಮ್ಮ ಕೆಲಸ ಮುಗಿದ್ರೂ ಹೋಗೋ ಹಾಗಿಲ್ಲ!’: ಉದ್ಯೋಗಿಗಳನ್ನು ಬ್ಯಾಂಕ್ ಒಳಗೇ ಕೂಡಿಟ್ಟ ಮ್ಯಾನೇಜರ್; ವಿಡಿಯೋ ವೈರಲ್​! Bank Manager Viral Video

ಬ್ಯಾಂಕ್‌ ಸಿಬ್ಬಂದಿಯನ್ನು ಮನೆಗೆ ಕಳುಹಿಸದೆ ಒಳಗಿನಿಂದ ಗೇಟ್ ಲಾಕ್ ಮಾಡಿದ ಮ್ಯಾನೇಜರ್!
ಬ್ಯಾಂಕ್‌ ಸಿಬ್ಬಂದಿಯನ್ನು ಮನೆಗೆ ಕಳುಹಿಸದೆ ಒಳಗಿನಿಂದ ಗೇಟ್ ಲಾಕ್ ಮಾಡಿದ ಮ್ಯಾನೇಜರ್!
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್‌ ಸಿಬ್ಬಂದಿಯನ್ನು ಮನೆಗೆ ಕಳುಹಿಸದೆ ಒಳಗಿನಿಂದ ಗೇಟ್ ಲಾಕ್ ಮಾಡಿದ ಮ್ಯಾನೇಜರ್!
  • ಮ್ಯಾನೇಜರ್ ದೌರ್ಜನ್ಯದ ವಿರುದ್ಧ ನೆಟ್ಟಿಗರು ಗರಂ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ವೈರಲ್​: ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಕಂಪನಿಗಳಲ್ಲಿ ಅವಧಿಗೆ ಮೀರಿ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ಆರೋಪವನ್ನು ಕೇಳಿರುತ್ತೆವೆ. ಆದರೆ ಈಗ ಕೆಲ ದಿನಗಳ ಹಿಂದೆ ಬ್ಯಾಂಕ್​ವೊಂದರಲ್ಲಿ ಸಹ ಇದೇ ರೀತಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಹಗಲಿಡೀ ದುಡಿದು ಸುಸ್ತಾಗಿ ಮನೆಗೆ ಹೋಗಬೇಕಾಗಿದ್ದ ಬ್ಯಾಂಕ್ ಸಿಬ್ಬಂದಿಯನ್ನು, ಮ್ಯಾನೇಜರ್ (Bank Manager Viral Video) ಒಬ್ಬರು ಒಳಗಿನಿಂದ ಗೇಟ್ ಲಾಕ್ ಮಾಡಿ ಕೂಡಿಟ್ಟ ಶಾಕಿಂಗ್ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಸಂಜೆ ಆರು ಗಂಟೆ ನಂತರ ಬ್ಯಾಂಕ್​ ಸಿಬ್ಬಂದಿ ಒಬ್ಬರು ಮ್ಯಾನೇಜರ್ ಬಳಿ ಹೋಗಿ, ಸರ್, ನನ್ನ ಶಿಫ್ಟ್ ಸಂಜೆ 5 ಗಂಟೆಗೆ ಮುಗಿದಿದೆ. ಈಗಾಗಲೇ 6 ಗಂಟೆಯಾಗಿದೆ. ನನ್ನ ಪಾಲಿನ ಎಲ್ಲಾ ಕೆಲಸಗಳನ್ನೂ ನಾನು ಮುಗಿಸಿದ್ದೇನೆ, ಆದರೂ ನನ್ನನ್ನು ಯಾಕೆ ಮನೆಗೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾನೆ.
ಈ ಪ್ರಶ್ನೆಗೆ ಮ್ಯಾನೇಜರ್, ಸಂಜೆ 5 ಗಂಟೆ ನಂತರ ಕೆಲಸ ಮಾಡಿದರೆ ಓವರ್‌ಟೈಮ್ ದುಡ್ಡು ಸಿಗುತ್ತದೆ. ಬ್ಯಾಂಕಿನಲ್ಲಿರುವ ಪ್ರತಿಯೊಬ್ಬರ ಕೆಲಸ ಮುಗಿಯುವವರೆಗೂ ಯಾರೂ ಮನೆಗೆ ಹೋಗುವಂತಿಲ್ಲ. ಓವರ್‌ಟೈಮ್ ಮಾಡುವುದು ಕಡ್ಡಾಯ ಎಂದು ಹೇಳಿದ್ದಾನೆ.
ತನ್ನ ಸ್ವಂತ ಕೆಲಸ ಮುಗಿದಿದ್ದರೂ ಬೇರೆಯವರಿಗಾಗಿ ತಾನು ಯಾಕೆ ಇಲ್ಲೇ ಕೂರಬೇಕು ಎಂದು ಉದ್ಯೋಗಿ ಪ್ರಶ್ನಿಸುತ್ತಿದ್ದಂತೆಯೇ, ಮ್ಯಾನೇಜರ್ ಆತನ ಮಾತಿಗೆ ತಲೆಕೆಡಿಸಿಕೊಳ್ಳದೆ ನೇರವಾಗಿ ಹೋಗಿ ಬ್ಯಾಂಕ್‌ನ ಮುಖ್ಯ ಗೇಟ್‌ನ ಗ್ರಿಲ್ ಶಟರ್ ಅನ್ನು ಒಳಗಿನಿಂದ ಲಾಕ್ ಮಾಡಿದ್ದಾನೆ.

ನೆಟ್ಟಿಗರ ಆಕ್ರೋಶ; ಆರ್‌ಬಿಐಗೆ ಟ್ಯಾಗ್!

ಈ ವಿಡಿಯೋ ಹೊರಬರುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಸಾವಿರಾರು ಜನ ಈ ಪೋಸ್ಟ್‌ ಅನ್ನು ಲೈಕ್ ಹಾಗೂ ರಿ-ಟ್ವೀಟ್ ಮಾಡುತ್ತಿದ್ದು, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅನೇಕರು ಈ ವಿಡಿಯೋಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನ್ನು ಟ್ಯಾಗ್ ಮಾಡಿ, ಇದು ನೌಕರರ ಮೇಲಿನ ಸ್ಪಷ್ಟ ದೌರ್ಜನ್ಯ. ಇಂತಹ ಮ್ಯಾನೇಜರ್‌ಗಳ ಪರವಾನಗಿ ರದ್ದು ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು, ಅಲ್ಲಿ ಅಷ್ಟೆಲ್ಲಾ ಜಗಳ ಆಗುತ್ತಿದ್ದರೂ, ಉಳಿದ ಬ್ಯಾಂಕ್ ಸಿಬ್ಬಂದಿ ಏನೂ ತಿಳಿಯದವರಂತೆ ಮೌನವಾಗಿ ಕುಳಿತಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net