ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು, 1 ಕೋಟಿ ಪರಿಹಾರಕ್ಕೆ ಆಗ್ರಹ: ಜೆ.ಪಿ. ನಡ್ಡಾಗೆ ಜಿರಳೆಗಳ ಮನವಿ! CJP with JP Nadda

ಜೆ.ಪಿ. ನಡ್ಡಾರನ್ನು ಬೇಟಿ ಮಾಡಿದ ಸಿಜೆಪಿ ನಾಯಕರು
ಜೆ.ಪಿ. ನಡ್ಡಾರನ್ನು ಬೇಟಿ ಮಾಡಿದ ಸಿಜೆಪಿ ನಾಯಕರು
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕಾಕ್ರೋಜ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ರ‍್ಯಾಲಿ
  • ರ‍್ಯಾಲಿ ಬೆನ್ನಲ್ಲೇ ಕೇಂದ್ರ ಸಚಿವ ಜೆ.ಪಿ. ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ
  • ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿ 3 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸಿಜೆಪಿ ನಾಯಕರ ಪಟ್ಟು
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್​ ಮಂತರ್​ನಿಂದ ಸಂಸತ್​ ಭವನದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಪ್ರತಿಭಟನೆ ತೀವ್ರತೆಯನ್ನು ಗಮನಿಸಿ ಕೇಂದ್ರ ಸರ್ಕಾರ, ಜೆ.ಪಿ. ನಡ್ಡಾರನ್ನು ಸಿಜೆಪಿ (CJP with JP Nadda) ಪಕ್ಷದವರ ಜೊತೆ ಮಾತುಕತೆ ನಡೆಸುವಂತೆ ಸೂಚನೆ ನೀಡಲಾಗಿತ್ತು ಎಂದು ತಿಳಿದು ಬಂದಿತ್ತು. ಈಗ ನಡ್ಡಾ ಅವರ ಜೊತೆ ಮಾತನಾಡುತ್ತಿರುವ ಸಿಜೆಪಿ ವಕ್ತಾರರು ಈ ಬಗ್ಗೆ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಡ್ಡಾ ಸಮಯವನ್ನು ಕೇಳಿದ್ದಾರೆ!

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಜೊತೆಗೆ ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರರಾದ ಆಶುತೋಷ್​ ರಾಂಕಾ ಹಾಗೂ ಸೌರವ್​ ದಾಸ್​​ ಚರ್ಚೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ.
ನಾವು ಈಗ ನಡ್ಡಾ ಅವರ ನಿವಾಸದಲ್ಲಿದ್ದೆವೆ. ಅವರಿಗೆ ನಮ್ಮ ಪ್ರಮುಖ ಬೇಡಿಕೆಗಳಾದ, ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ರಾಜೀನಾಮೆ, ಸೋನಮ್​ ವಾಂಗ್​ಚುಕ್​ ಅವರ ಬಿಡುಗಡೆ ಹಾಗೂ ನೀಟ್​ ಪರೀಕ್ಷೆಯಿಂದ ಮೃತಪಟ್ಟ ವಿದ್ಯಾರ್ಥಿಗಳಿಗೆ ಒಂದು ಕೋಟಿ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದ್ದೆವೆ.
ನಮ್ಮ ಮಾತನ್ನು ಜೆ.ಪಿ. ನಡ್ಡಾ ಅವರು ಕೇಳಿಸಿಕೊಂಡಿದ್ದು, ಈ ಕುರಿತು ನಾನು ಕೇಂದ್ರದ ಮಂತ್ರಿಗಳೊಂದಿಗೆ ಚರ್ಚೆ ಮಾಡಬೇಕು. ಹೀಗಾಗಿ ಸ್ವಲ್ಪ ಸಮಯವಕಾಶವನ್ನು ನೀಡಿ ಎಂದು ಹೇಳಿದ್ದಾರೆಂದು ರಾಂಕಾ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಉಪವಾಸ ನಿಲ್ಲಿಸಿದ ದೀಪ್ಕೆ!

ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಪರಿಸರವಾದ ಸೋನಮ್​ ವಾಂಗ್​ಚುಕ್​​ 20 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ನಂತರ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ದೆಹಲಿ ಪೊಲೀಸರು ಶನಿವಾರ ಅವರನ್ನು ಸಫ್ದರ್​ಜಂಗ್​ ಆಸ್ಪತ್ರೆಗೆ ದಾಖಲಿಸಿತ್ತು.
ಈ ಘಟನೆ ಬಳಿಕ ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದರು. ಇಂದು ಪ್ರತಿಭಟನಾ ರ‍್ಯಾಲಿ ಆರಂಭಗೊಳ್ಳುತ್ತಲೇ ಸರ್ಕಾರದಿಂದ ಮಾತುಕತೆ ಭರವಸೆ ದೊರೆತ ಹಿನ್ನಲೆ ದೀಪ್ಕೆ ತಮ್ಮ ಉಪವಾಸವನ್ನು ಮೊಟಕು ಗೊಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net