ದೆಹಲಿಯಲ್ಲಿ ತೀವ್ರಗೊಂಡ ‘ಚಲೋ ಸಂಸತ್’: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಖಿಲೇಶ್​ ಪತ್ನಿ ಡಿಂಪಲ್​ ಯಾದವ್​ ಬಂಧನ! Dimple Yadav Arrest

ಹೋರಾಟಕ್ಕಿಳಿದ ಅಖಿಲೇಶ್ ಯಾದವ್ ಪತ್ನಿ, ಸಂಸದೆ ಡಿಂಪಲ್ ಯಾದವ್ ರನ್ನ ವಶಕ್ಕೆ ಪಡೆದ ಪೊಲೀಸರು
ಹೋರಾಟಕ್ಕಿಳಿದ ಅಖಿಲೇಶ್ ಯಾದವ್ ಪತ್ನಿ, ಸಂಸದೆ ಡಿಂಪಲ್ ಯಾದವ್ ರನ್ನ ವಶಕ್ಕೆ ಪಡೆದ ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕಾಕ್ರೋಜ್​ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ರ‍್ಯಾಲಿ
  • ಪ್ರತಿಭಟನೆ ಬೆಂಬಲಿಸಿದ್ದ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಬಂಧನ
  • ಹೋರಾಟಕ್ಕಿಳಿದ ಅಖಿಲೇಶ್ ಯಾದವ್ ಪತ್ನಿ, ಸಂಸದೆ ಡಿಂಪಲ್ ಯಾದವ್ ರನ್ನ ವಶಕ್ಕೆ ಪಡೆದ ಪೊಲೀಸರು
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್​ ಮಂತರ್​ನಿಂದ ಸಂಸತ್​ ಭವನದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಈ ಪ್ರತಿಭಟನೆಯನ್ನು ಬೆಂಬಲಿಸಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ, ಸಮಾಜವಾದಿ ಪಕ್ಷದ ಸಂಸದೆ, ಮಾಜಿ ಸಿಎಂ ಅಖಿಲೇಶ್​ ಯಾದವ್​ ಪತ್ನಿ ಡಿಂಪಲ್​ ಯಾದವ್ (Dimple Yadav Arrest)​ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿರುವ, ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಕ್ಕಾಗಿ ನಮ್ಮ ನಾಯಕಿ ಡಿಂಪಲ್​ ಯಾದವ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.
ಉಪವಾಸ ಹಿಂಪಡೆದ ದೀಪ್ಕೆ!
ಈ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಪರಿಸರವಾದ ಸೋನಮ್​ ವಾಂಗ್​ಚುಕ್​​ 20 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ನಂತರ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ದೆಹಲಿ ಪೊಲೀಸರು ಶನಿವಾರ ಅವರನ್ನು ಸಫ್ದರ್​ಜಂಗ್​ ಆಸ್ಪತ್ರೆಗೆ ದಾಖಲಿಸಿತ್ತು.
ಈ ಘಟನೆ ಬಳಿಕ ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದರು. ಇಂದು ಪ್ರತಿಭಟನಾ ರ‍್ಯಾಲಿ ಆರಂಭಗೊಳ್ಳುತ್ತಲೇ ಸರ್ಕಾರದಿಂದ ಮಾತುಕತೆ ಭರವಸೆ ದೊರೆತ ಹಿನ್ನಲೆ ದೀಪ್ಕೆ ತಮ್ಮ ಉಪವಾಸವನ್ನು ಮೊಟಕು ಗೊಳಿಸಿದ್ದಾರೆ.

ನಡ್ಡಾ ಜೊತೆ ಮಾತುಕತೆ!

ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಮಳೆಗಾಲದ ಸಂಸತ್​ ಅಧಿವೇಶನ ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ಕಾರ್ಯಕರ್ತರು ಸಂಸತ್​ಗೆ ಮುತ್ತಿಗೆ ಹಾಕಲು ಮುಂದಾಗಿದ್ದರೆಂದು ತಿಳಿದು ಬಂದಿದೆ.
ಈಗ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತುಕತೆಗೆ ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಕ್ರೋಚ್​ ಜನತಾ ಪಾರ್ಟಿ ವಕ್ತಾರ, ಸೌರವ್​ ದಾಸ್​​, ಎಕ್ಸ್​​ ಪೋಸ್ಟ್​ವೊಂದರಲ್ಲಿ, ಸೋಮವಾರ ಕಾಕ್ರೋಚ್​ ಜನತಾ ಪಾರ್ಟಿಯ ನಾಯಕರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಬೇಟಿಯಾಗಲು ಹೋಗುತ್ತಿದ್ದಾರೆ. ಸರ್ಕಾರ ನಮ್ಮನ್ನು ಸಂಪರ್ಕಿಸಿದೆ ಹೀಗಾಗಿ ಆಶುತೋಷ್​ ರಾಂಕಾ ನೇತೃತ್ವದಲ್ಲಿ ನಾವು ನಮ್ಮ ಬೇಡಿಕೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದು, ನಮಗೆ ಈ ಬಾರಿ ಜಯ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net